Select Your Language

Notifications

webdunia
webdunia
webdunia
webdunia

ಹರ ಹರ ಮಹಾದೇವ ಧಾರಾವಾಹಿ ಸೆಟ್`ಗೆ ಬೆಂಕಿ

ಹರ ಹರ ಮಹಾದೇವ ಧಾರಾವಾಹಿ ಸೆಟ್`ಗೆ ಬೆಂಕಿ
ಮುಂಬೈ , ಭಾನುವಾರ, 16 ಏಪ್ರಿಲ್ 2017 (18:36 IST)
ಮುಂಬೈನ ನಾಯಗನ್ ಪ್ರದೇಶದ ಮ್ಯಾಗ್ನಂ ಸ್ಟುಡಿಯೋದ ಲ್ಲಿ ನಡೆಯುತ್ತಿದ್ದ ಕನ್ನಡದ ಜನಪ್ರಿಯ ಧಾರಾವಾಹಿ ಹರಹರ ಮಹಾದೇವ ಸೆಟ್``ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗ್ಗೆ 11.30ಕ್ಕೆ ಶಾರ್ಟ್ ಸರ್ಕ್ಯೂಟ್`ನಿಂದ ಹೊತ್ತಿಕೊಂಡ ಬೆಂಕಿ ಬಳಿಕ ಇತರೆಡೆಗೂ ಆವರಿಸಿದೆ. 1 ಕೋಟಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ ಎಂದು ವರದಿಯಾಗಿದೆ. ಚಿತ್ರೀಕರಣದ ಸೆಟ್ ಸಂಪೂರ್ಣ ಸುಟ್ಟುಹೋಗಿದೆ. ಮರದ ವಸ್ತುಗಳೂ ಇದ್ದದ್ದರಿಂದ ಬೆಂಕಿ ಹೆಚ್ಚು ಆವರಿಸಿದೆ ಎನ್ನಲಾಗಿದೆ.

ಇದು 10ನೇ ಸ್ಟುಡಿಯೋ ಆಗಿದ್ದು, ಸಮೀಪದ 9ನೇ ಸ್ಟುಡಿಯೋಗೂ ಅಗ್ನಿ ಆವರಿಸಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ನಿಖಿಲ್ ಸಿನ್ಹಾ ನಿರ್ದೇಶನದ ಹರ ಹರ ಮಹಾದೇವ ಪೌರಾಣಿಕ ಕಥೆಹೊಂದಿದ್ದು, ಕನ್ನಡದ ಮಟ್ಟಿಗೆ ಅದ್ದೂರಿ ಧಾರಾವಾಹಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪೇಗೌಡ ಸಿನಿಮಾ ಭಾಗ 2 ಬರ್ತಿದೆ.. ನಾಯಕ ಯಾರು ಗೊತ್ತಾ?!