Webdunia - Bharat's app for daily news and videos

Install App

ಕೊನೆಗೂ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ; ಪತ್ನಿ ರಾಧಿಕಾ ಫುಲ್ ಖುಷಿ, ಅಭಿಮಾನಿಗಳು ಏನಂದ್ರು ಗೊತ್ತೇ?

Webdunia
ಶನಿವಾರ, 25 ಆಗಸ್ಟ್ 2018 (16:37 IST)
ಬೆಂಗಳೂರು: ನಟ ಯಶ್ ಮುಖದ ಮೇಲೆ ಕಳೆದ ಎರಡು ವರ್ಷಗಳಿಂದ ಗಡ್ಡ ಇತ್ತು. ಯಶ್ ಎಲ್ಲಿಯೇ ಹೋದರೂ ಯಶ್ ಗೆ 'ನೀವು ಗಡ್ಡ ಯಾವಾಗ ತೆಗೆಯುತ್ತಿರಾ?' ಎಂದು ಕೇಳುತ್ತಿದ್ದರು. ಆದರೆ, ಈಗ ಕೊನೆಗೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಎರಡು ವರ್ಷಗಳ ನಂತರ ಕೊನೆಗೂ ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಯಶ್ ಗಡ್ಡಕ್ಕೆ ಮುಕ್ತಿ ನೀಡಿದ ವಿಡಿಯೋವನ್ನು ಪತ್ನಿ, ನಟಿ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.


ಯಶ್ ಗಡ್ಡದ ಬಗ್ಗೆ ಮಾತನಾಡಿರುವ ರಾಧಿಕಾಪಂಡಿತ್  ‘ಇವತ್ತು ನನಗೆ ಸಖತ್ ಖುಷಿ ಆಗುತ್ತಿದೆ. ನನ್ನ ಜೊತೆಗೆ ನೀವು ಕೂಡ ಕಾಯುತ್ತಿದ್ದ ಈ ಉದ್ದ ಕೂದಲು ಹಾಗೂ ಗಡ್ಡ ಹೋಗುತ್ತಿದೆ. ಫೈನಲಿ ಈ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನಗೆ ನನ್ನ ಗಂಡ ಹಿಂದೆ ಹೇಗೆ ಕಾಣಿಸುತ್ತಿದ್ದರು ಎಂದು ನೆನಪೆ ಇಲ್ಲದಂತೆ ಆಗಿತ್ತು’ ಎಂದು ತಮಾಷೆ ಮಾಡಿದ್ದಾರೆ.


ಯಶ್ ಸಹ ಗಡ್ಡದ ಬಗ್ಗೆ ಮಾತನಾಡಿದ್ದು,’'ಗಡ್ಡ ತೆಗೆಯೋಕ್ಕೆ ಮನಸ್ಸು ಇಲ್ಲ. ಎರಡು ವರ್ಷಗಳಿಂದ ಇದರ ಜೊತೆಗೆ ಇದ್ದು ಇದ್ದು ಅಭ್ಯಾಸ ಆಗಿದೆ. ಗಡ್ಡ ಇರಲಿ ಎಂದು ನಾನು ಒಂದು ಬಾರಿ ಒಪ್ಪಿಸೊಕ್ಕೆ ಪ್ರಯತ್ನ ಮಾಡಿದೆ. ಆದರೆ ನಿರ್ದೇಶಕರು, ರಾಧಿಕಾ ಕೇಳಲಿಲ್ಲ. ಇದು ನನಗೆ ಬೇಜಾರು ವಿಷಯ, ಆದರೆ ಇವರೆಲ್ಲರಿಗೆ ಖುಷಿ ಆಗುತ್ತಿದೆ’  ಎಂದು ನಗುತ್ತಾ ಹೇಳಿದ್ದಾರೆ.


ಅಂದಹಾಗೇ, 'ಮೈ ನೇಮ್ ಇಸ್ ಕಿರಾತಕ' ಚಿತ್ರಕ್ಕಾಗಿ ನಟ ಯಶ್ ಈ ಹೊಸ ಲುಕ್ ಅನ್ನು ಟ್ರೈ ಮಾಡಿದ್ದಾರೆ. ಹಾಗಾಗಿ ರಾಧಿಕಾ ಕಿರಾತಕ ತಂಡಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿದ್ದಕ್ಕೆ ಹೇಗೆಲ್ಲ ಕಾಮೆಂಟ್ ಮಾಡಿದ್ದಾರೆ ನೋಡಿ.


‘ಯಶ್ ಬಾಸ್ ಗಡ್ಡ ನಮಗಿಷ್ಟ, ತೆಗೆದ್ರೆ ಅತ್ತಿಗೆ ಖುಷಿ, ಅತ್ತಿಗೆ ಖುಷಿಯಾದ್ರೆ ನಮ್ಮ ಮಿನಿ ಯಶ್ ಬಾಸ್ ಖುಷಿ., ಮಿನಿ ಯಶ್ ಬಾಸ್ ಖುಷಿಯಾದ್ರೆ, ಯಶ್ ಬಾಸ್ ಅಮ್ಮ ಅಪ್ಪ ಖುಷಿ. ಆದರ್ಶ ದಂಪತಿಗಳು ಯಾವಾಗಲೂ ಖುಷಿಯಾದ್ರೆ ಈ ಅಭಿಮಾನಿಗಳು ಖುಷಿ’, ಇನ್ನು ಕೆಲವರು ಫೈನಲಿ ಹ್ಯಾಂಡ್ ಸಮ್ ಇಸ್ ಬ್ಯಾಕ್, ಎಂಜಾಯ್ ಯುವರ್ ಪ್ರೆಗೆನ್ಸಿ ರಾಧಿಕಾ, ಈ ಹೇರ್ ಕಟ್ ನಿಮ್ಮ ಮಗುವಿಗೊಂದು ಗಿಫ್ಟ್’  ‘ಇದು ಯಶ್ ಅಂದ್ರೆ ಮೊದಲು ಹುಚ್ಚನ ಹಾಗೆ ಇದ್ರು ಇವಾಗ ಹೀರೋ ಕಳೆ ಬಂತು’ ‘ಅಂತೂ ಹಳೆ ಯಶ್ ನ ನೋಡಿದ ಹಾಗೇ ಆಯ್ತು ‘ ಅಂತೆಲ್ಲಾ ತಮ್ಮ ಸಂತಸವನ್ನು ಕಾಮೆಂಟ್ ಮಾಡುವುದರ ಮೂಲಕ  ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments