ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬೇಕೆಂಬ ಬಹುದಿನದ ಕನಸು ಕೊನೆಗೂ ನನಸಾಗುತ್ತಿದೆ. ಭಾರತ ವಿಷ್ಣುವರ್ಧನ್ ಆಸೆಯಂತೆ ಮೈಸೂರಿನಲ್ಲೇ ಸಿಂಹಧಾಮ ಸ್ಥಾಪನೆಯಾಗಲಿದೆ.
ಇದುವರೆಗೆ ಸರ್ಕಾರ ಜಮೀನು ಕೊಟ್ಟರೆ, ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬದವರು ಬೆಂಗಳೂರಿನಲ್ಲಿ ಸಮಾಧಿ ಬೇಡ ಎನ್ನುತ್ತಿದ್ದರು. ಅಂತೂ ಇಂತೂ ಎಲ್ಲಾ ಅಡೆತಡೆಗಳನ್ನು ದಾಟಿ ಡಿಸೆಂಬರ್ 6 ರಂದು ಮೈಸೂರಿನ ಹಾಲಾಳುವಿನ ಉದ್ಭೂರು ಕ್ರಾಸ್ ಸಮೀಪ ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಲಿದೆ.
ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇವರ ಜತೆಗೆ ಭಾರತಿ ವಿಷ್ಣುವರ್ಧನ್, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ ದೇವೇಗೌಡ, ಅಂಬರೀಶ್, ಜತೆಗೆ ಚಿತ್ರರಂಗದ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ