Select Your Language

Notifications

webdunia
webdunia
webdunia
webdunia

ಸಿಎಂ ಭೇಟಿ ಸಕ್ಸಸ್ ಆಯ್ತು, ಚಿತ್ರೋದ್ಯಮಕ್ಕೆ ಗುಡ್ ನ್ಯೂಸ್ ಸಿಕ್ತು

ಸಿಎಂ ಭೇಟಿ ಸಕ್ಸಸ್ ಆಯ್ತು, ಚಿತ್ರೋದ್ಯಮಕ್ಕೆ ಗುಡ್ ನ್ಯೂಸ್ ಸಿಕ್ತು
ಬೆಂಗಳೂರು , ಬುಧವಾರ, 7 ಜುಲೈ 2021 (09:21 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಚಿತ್ರಮಂದಿರ ತೆರೆಯಲು ಕೊನೆಗೂ ಅನುಮತಿ ಸಿಕ್ಕಿದೆ. ಸಿಎಂ ಭೇಟಿ ಮಾಡಿದ ವಾಣಿಜ್ಯ ಮಂಡಳಿ ಸದಸ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ.


ಲಾಕ್ ಡೌನ್ ಬಳಿಕ ಇದುವರೆಗೆ ಹೊರಾಂಗಣ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ನಿನ್ನೆ ಸಿಎಂ ಯಡಿಯೂರಪ್ಪ ಗೃಹ ಕಚೇರಿಯಲ್ಲಿ ವಾಣಿಜ್ಯ ಮಂಡಳಿ ನಾಯಕರು ಭೇಟಿಯಾಗಿ ಥಿಯೇಟರ್ ತೆರೆಯಲು ಅನುಮತಿ ನೀಡುವಂತೆ ಮತ್ತು ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಇದೀಗ ಸರ್ಕಾರ ಥಿಯೇಟರ್ ತೆರೆಯಲು ಅವಕಾಶ ನೀಡಿದೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಬರಬೇಕಿದೆ. ಕೊರೋನಾ ಪ್ರಕರಣ ಕಡಿಮೆಯಾಗಿರುವುದರಿಂದ ಇದೇ ತಿಂಗಳು ಥಿಯೇಟರ್ ತೆರೆಯಲು ಅನುಮತಿ ನೀಡುವುದಾಗಿ ಮೌಖಿಕ ಭರವಸೆ ನೀಡಿದ್ದಾರೆ. ಇನ್ನು, ಅಧಿಕೃತ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ