Publish Date: Wed, 02 Nov 2016 (09:05 IST)
Updated Date: Wed, 02 Nov 2016 (09:13 IST)
ಬೆಂಗಳೂರು: ಕರ್ನಾಟಕ ಸರ್ಕಾರ ವಿವಿಧ ಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಸಿನಿಮಾ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಟಿ ಲಕ್ಷ್ಮಿ, ಶ್ರೀನಿವಾಸ ಮೂರ್ತಿ, ಸತ್ಯಜಿತ್ ಮತ್ತು ಸಾ ರಾ ಗೋವಿಂದು ಅವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸುವ ವೇಳೆಗೆ ನಟಿ ಲಕ್ಷ್ಮಿ ಕೊಂಚ ಗದ್ಗತಿರಾದಂತೆ ಕಂಡುಬಂದರು.
ಗಾಂಗ್ರಿನ್ ನಿಂದಾಗಿ ಕಾಲು ಕಳೆದುಕೊಂಡ ನಟ ಸತ್ಯಜಿತ್ ಗಾಲಿ ಕುರ್ಚಿಯಲ್ಲಿ ಕುಳಿತೇ ಪ್ರಶಸ್ತಿ ಸ್ವೀಕರಿಸಿದರು. ಅಲ್ಲೇ ಇದ್ದ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಅವರ ಆರೋಗ್ಯ ವಿಚಾರಿಸಕೊಂಡರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾ ಶ್ರೀ, ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಮೊದಲಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ