Select Your Language

Notifications

webdunia
webdunia
webdunia
webdunia

ಅಮ್ಮನ ಸಾವಿಗೆ ಕಂಬನಿ ಮಿಡಿಯಿತು ಚಿತ್ರರಂಗ

ಜಯಲಲಿತಾ ನಿಧನ
Chennai , ಮಂಗಳವಾರ, 6 ಡಿಸೆಂಬರ್ 2016 (10:50 IST)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ದೇಶದ ಪ್ರಮುಖ ಚಿತ್ರರಂಗದ ಗಣ್ಯರು ವಿಷಾಧ ವ್ಯಕ್ತಪಡಿಸಿದ್ದಾರೆ. ಬಾಲಿವುಡ್, ತಮಿಳು ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಟ್ವಿಟರ್ ನಲ್ಲಿ ಜಯಲಲಿತಾ ಸಾವಿನಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಜಯಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ತಮಿಳುನಾಡು ಧೈರ್ಯವಂತೆ ಹೆಣ್ಣುಮಗಳನ್ನು ಕಳೆದುಕೊಂಡಿದೆ ಎಂದು ಬಣ್ಣಿಸಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್  ಒಬ್ಬ ಮುಖ್ಯಮಂತ್ರಿಯಾಗಿ ಸಿನಿಮಾದಲ್ಲಿ 100 ದಿನ ಪೂರೈಸಿದ ಹೆಗ್ಗಳಿಕೆ ಅವರದ್ದು ಎಂದಿದ್ದಾರೆ. ಮಲಯಾಳಂ ಸೂಪರ್ ಸ್ಟಾರ್ ಗಳಾದ ಮಮ್ಮುಟ್ಟಿ, ಮೋಹನ್ ಲಾಲ್, ತಮಿಳು ನಟರಾದ  ಅಜಿತ್ ಕುಮಾರ್, ಧನುಷ್, ತ್ರಿಷಾ ಕೃಷ್ಣನ್, ಹಂಸಿಕಾ ಮೊಟ್ವಾನಿ, ಶೃತಿ ಹಾಸನ್, ಗೌತಮಿ, ಕನ್ನಡದ ಕಿಚ್ಚ ಸುದೀಪ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ನಟಿ ಸುಹಾಸಿನಿ, ಸಂಗೀತ ನಿರ್ದೇಶಕ ಇಳಯರಾಜ ಮೃತರ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆ ಸೊಸೆ ಜಗಳ ಇಲ್ಲದ ಧಾರಾವಾಹಿ “ನಿಹಾರಿಕಾ”