ಬೆಂಗಳೂರು: ಕಿಚ್ಚ ಸುದೀಪ್ ಇಂದು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಗೆ ಬಹಿರಂಗವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ ಬಳಿಕ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಮಾನ್ಯವಾಗಿ ತಮ್ಮ ಸ್ಟಾರ್ ಗಳು ಯಾವ ರಾಜಕೀಯ ಪಕ್ಷಕ್ಕೂ ಸೀಮಿತವಾಗುವುದನ್ನು ಅಭಿಮಾನಿಗಳು ಬಯಸುವುದಿಲ್ಲ. ಇದೀಗ ಕಿಚ್ಚನ ವಿಷಯದಲ್ಲೂ ಅದೇ ಆಗಿದೆ.
ಸಿಎಂ ಬೊಮ್ಮಾಯಿ ಕಿಚ್ಚನಿಗೆ ತಮ್ಮ ಮೇಲಿರುವ ಪ್ರೀತಿಯನ್ನು ದುರುಪಯೋಗಪಡಿಸಿಕೊಂಡು ರಾಜಕೀಯಕ್ಕೆ ಎಳೆದು ತಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಮತ್ತೆ ಕೆಲವರು ಕಿಚ್ಚ ನಿಮಗೆ ರಾಜಕೀಯ ಬೇಡ ಎಂದು ಟ್ವಿಟರ್ ಟ್ರೆಂಡ್ ನ್ನೇ ಶುರು ಮಾಡಿದ್ದಾರೆ. ನಿಮಗೆ ಪಾಲಿಟಿಕ್ಸ್ ಯಾಕೆ ಬಾಸ್? ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯ ಬೇಕಾಗಿಲ್ಲ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ.