Select Your Language

Notifications

webdunia
webdunia
webdunia
webdunia

ಖ್ಯಾತ ನಿರ್ಮಾಪಕನ ಹೆಸರಲ್ಲಿ ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ಪ್ರೊಡ್ಯೂಸರ್!

ಖ್ಯಾತ ನಿರ್ಮಾಪಕನ ಹೆಸರಲ್ಲಿ ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ಪ್ರೊಡ್ಯೂಸರ್!
Bangalore , ಶನಿವಾರ, 3 ಜೂನ್ 2017 (11:27 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಖ್ಯಾತ ನಿರ್ಮಾಪಕ ಕೆ. ಮಂಜು ಹೆಸರು ಬಳಸಿಕೊಂಡು ವ್ಯಕ್ತಿಯೊಬ್ಬ ಯುವತಿಯರಿಗೆ ಮೋಸ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

 
ಮಂಜುನಾಥ್ ಮೂರ್ತಿ ಎಂಬಾತ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ಕೆ. ಮಂಜು ತಾನೆಂದು ಹೇಳಿಕೊಂಡು ಯುವತಿಯರಿಗೆ ಕರೆ ಮಾಡುತ್ತಿದ್ದ. ಅಲ್ಲದೆ ಸಿನಿಮಾಗೆ ಅವಕಾಶ ಕೊಡುವುದಾಗಿ ವಂಚಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.

ಈತನ ಅಸಲಿ ಮುಖವಾಡ ಇದೀಗ ಬಯಲಾಗಿದೆ. ಸ್ವತಃ ನಿರ್ಮಾಪಕ ಕೆ. ಮಂಜು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಯುವತಿಯರು ಇಂತಹ ನಕಲಿ ವ್ಯಕ್ತಿಗಳ ಆಮಿಷಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಪಾತ್ರ ಮಾಡಲಿರುವ ಹೀರೋ ಯಾರು ಗೊತ್ತಾ?!