ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿತ್ತು.
ಭಾರತಿ ವಿಷ್ಣುವರ್ಧನ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರೀಗ ಹಾಸಿಗೆ ಹಿಡಿದಿದ್ದಾರೆ. ಊಟ ಮಾಡಲೂ ಕಷ್ಟವಾಗಿದೆ ಎಂದು ಕೆಲವು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.
ಈ ಬಗ್ಗೆ ಅವರ ಅಳಿಯ, ನಟ ಅನಿರುದ್ಧ್ ಜತ್ಕಾರ್ ವೆಬ್ ದುನಿಯಾಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಮೊದಲಿನಿಂದಲೂ ಮಂಡಿನೋವಿದೆ. ಆ ನೋವು ಕಾಣಿಸಿಕೊಂಡಿದೆಯಷ್ಟೇ. ಅದರ ಹೊರತಾಗಿ ಅವರು ಆರೋಗ್ಯವಾಗಿಯೇ ಇದ್ದಾರೆ. ಏನೂ ಸಮಸ್ಯೆಯಾಗಿಲ್ಲ ಎಂದು ಅನಿರುದ್ಧ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರ ನಂದಿ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಭಾರತಿ ವಿಷ್ಣುವರ್ಧನ್ ಭಾಗಿಯಾಗಿರಲಿಲ್ಲ. ಅವರಿಗೆ ಕೆಲವು ಸಮಯದಿಂದಲೂ ಮಂಡಿ ನೋವಿನ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಈಗಲೂ ಅದೇ ಸಮಸ್ಯೆ ಕಾಣಿಸಿಕೊಂಡಿದೆಯಷ್ಟೇ. ಗಾಬರಿ ಪಡುವಂತದ್ದು ಏನೂ ಇಲ್ಲ ಎಂದಿದ್ದಾರೆ ಅನಿರುದ್ಧ್.