Select Your Language

Notifications

webdunia
webdunia
webdunia
webdunia

ಸಂಕೇತ್ ಕಾಶಿ ಕೊನೆಯ ಚಿತ್ರಕ್ಕೆ ಸೆನ್ಸಾರ್ ಮೆಚ್ಚುಗೆ

ಏನೆಂದು ಹೆಸರಿಡಲಿ
Bangalore , ಮಂಗಳವಾರ, 20 ಡಿಸೆಂಬರ್ 2016 (11:46 IST)
ಪ್ರೀತಿಗೂ ಸೈ, ಪ್ರೇಮಕ್ಕೂ ಜೈ ಎಂದು ಸಾರುತ್ತಾ ಮನರಂಜನೆಯ ಜೊತೆಗೆ ಭಾವನಾತ್ಮಕ ಬೆಸುಗೆ ಹಾಕಿರುವ ಚಿತ್ರ  `ಏನೆಂದು ಹೆಸರಿಡಲಿ. ಈ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ `ಯು’ ಅರ್ಹತಾ ಪತ್ರವನ್ನು ನೀಡಿದೆ ಎಂದು ಷುಗರ್ ಕ್ಯೂಬ್ ಕ್ರಿಯೇಷನ್ ಸಂಸ್ಥೆಯ ನಿರ್ಮಾಪಕರಾದ ಶ್ರೀನಿವಾಸ್ ಕುಲಕರ್ಣಿ ಹಾಗೂ ಶ್ರುತಿ ಕುಲಕರ್ಣಿ ಅವರು ತಿಳಿಸಿದ್ದಾರೆ.
 
ರವಿ ಬಸಪ್ಪನದೊಡ್ಡಿ ಕಿರುತೆರೆಯಿಂದ ಹಿರಿತೆರೆಗೆ ಈ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಕಾಲ ಮಾನದ ಎಲ್ಲ ವಯೋವರ್ಗದವರಿಗೂ ಸಲ್ಲುವ, ಪ್ರತಿಯೊಬರೂ ಸಂಸಾರ ಸಮೇತರಾಗಿ ನೋಡಬಹುದಾದ ಚಿತ್ರ `ಏನೆಂದು ಹೆಸರಿಡಲಿ’ ಎಂದು ಹರ್ಷದಿಂದ ರವಿ ಅವರು ತಿಳಿಸುತ್ತಾರೆ.
 
ಸಹ ನಿರ್ಮಾಪಕರಾಗಿ ಮಧು ಕುಲಕರ್ಣಿ, ಭಾರತಿ ಗುನಳ್ಳಿ, ಅನುಷ ಕುಲಕರ್ಣಿ ಜೊತೆಯಾಗಿದ್ದಾರೆ. ಕಥೆ ಹಾಗೂ ಚಿತ್ರಕಥೆ ಪೂರ್ಣೆಶ್ ಸಾಗರ್, ಜೋಗಿ (ಎಚ್ ಗಿರೀಶ್ ರಾವ್) ಅವರ ಸಂಭಾಷಣೆ, ಮಂಜುನಾಥ್ ಬಿ ನಾಯಕ್ ಛಾಯಾಗ್ರಹಣ, ಸುರೇಂದ್ರನಾಥ್ ಅವರ ಸಂಗೀತ, ಶ್ರೀಕಾಂತ್ ಸಂಕಲನ, ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಕವಿರಾಜ್, ದೊಡ್ಡ ರಂಗೇಗೌಡ, ಪೂರ್ಣೆಶ್ ಸಾಗರ್ ಗೀತಸಾಹಿತ್ಯ ಒದಗಿಸಿದ್ದಾರೆ.
 
ಕಥಾ ನಾಯಕನಾಗಿ ಅರ್ಜುನ್, ರೋಜಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಸಂಕೇತ್ ಕಾಶಿ ಅವರ ಕಡೇಯ ಚಿತ್ರ. ಚಿತ್ಕಳಾ ಬಿರಾದರ್, ಮಿಲಿಂದ್ ಗುಣಾಜಿ, ಸುನೇತ್ರ ಪಂಡಿತ್, ಎಂ ಎಸ್ ಉಮೇಶ್, ಸೂರಜ್, ಬೇಬಿ ಸೇವಂತಿ ಮತ್ತಿತರರು ತಾರಾಗಣದಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಲ್ಲಿ ಶುರುವಾಯ್ತು ಗೋಲ್ಡನ್ ಸ್ಟಾರ್ ’ಮುಗುಳ್ನಗೆ’