Select Your Language

Notifications

webdunia
webdunia
webdunia
webdunia

ಏನ್ ನಿನ್ ಪ್ರಾಬ್ಲಮ್ಮು, ತಿಥಿ ಮಾಡ್ಬೇಕಾ ಅಂತಿದ್ದಾರೆ ಗಡ್ಡಪ್ಪ

ಏನ್ ನಿನ್ ಪ್ರಾಬ್ಲಮ್ಮು, ತಿಥಿ ಮಾಡ್ಬೇಕಾ ಅಂತಿದ್ದಾರೆ ಗಡ್ಡಪ್ಪ
Bangalore , ಗುರುವಾರ, 19 ಜನವರಿ 2017 (11:01 IST)
ಈ ಹಿಂದೆ ಗಾಲಿ ಎಂಬ ಚಿತ್ರ ನಿರ್ದೇಶನ ಮಾಡಿ ಖ್ಯಾತರಾಗಿರುವ ಲಕ್ಕಿ ಅವರ ಹೊಸಾ ಚಿತ್ರ ’ಏನ್ ನಿನ್ ಪ್ರಾಬ್ಲಮ್ಮು’. ಟ್ರೈಲರ್ ಮೂಲಕ ಚರ್ಚೆಗೀಡಾಗಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಯೋಗೇಶ್ ನಿರ್ಮಾಣದ ಈ ಚಿತ್ರದಲ್ಲಿ ತಿಥಿ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರಾಗಿರುವ ಗಡ್ಡಪ್ಪ ಮತ್ತು ಸೆಂಚುರಿಗೌಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಇವರಿಬ್ಬರ ಇರುವಿಕೆಯೇ ಈ ಚಿತ್ರದ ಬಗ್ಗೆ ಕುತೂಹಲ ಹುಟ್ಟಲು ಕಾರಣವಾಗಿದೆ. ನಂದಿನಿ ಎಂಬ ನವ ನಟಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು ಥಿಯೇಟರ್ಸ್ ಸಂಸ್ಥೆಯ ಮೂಲಕ ಈ ಚಿತ್ರ ರಾಜ್ಯಾಧ್ಯಂತೆ ತೆರೆ ಕಾಣಲಿದೆ.
 
ಈ ಚಿತ್ರದ ಅಡಿಬರಹ ತಿಥಿ ಮಾಡ್ಬೇಕಾ ಎಂಬುದು. ತಿಥಿ ಚಿತ್ರದ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿರುವ ಕಲಾವಿದರನ್ನು ಇಟ್ಟುಕೊಂಡು ಚಿತ್ರ ಮಾಡಿರುವುದು ವಿಶೇಷ. ಲಕ್ಕಿ ಸಿನಿಮಾ ಎಂದರೆ ಡಬಲ್ ಮೀನಿಂಗ್‌ ಸಂಭಾಷಣೆಗೆ ಆದ್ಯತೆ ಇರುತ್ತದೆ. ಇಲ್ಲೂ ಅದೇ ವರಸೆ ಇರುವಂತೆ ಕಾಣುತ್ತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿಯಲ್ಲಿ ತ್ರಿಧಾ ಚೌದರಿ ಆಟ ಬೊಂಬಾಟ್