Publish Date: Wed, 02 Sep 2020 (16:49 IST)
Updated Date: Wed, 02 Sep 2020 (16:51 IST)
ಸಿನಿಮಾ ರಂಗದ ಉಳಿವಿಗಾಗಿಯೇ ನಾನು ಇದೀಗ ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ಹೀಗಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ತಮ್ಮ ಸದಸ್ಯತ್ವ ಕುರಿತು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಇಂದ್ರಜಿತ್, ನಮ್ಮ ತಂದೆ ಹಲವು ದಶಕಗಳ ಕಾಲ ಸಿನಿಮಾ ರಂಗದಲ್ಲಿದ್ದವರು.
ಕನ್ನಡ ಸಿನಿಮಾಗಳನ್ನು ನಾನೂ ನಿರ್ದೇಶನ, ನಿರ್ಮಾಣ ಮಾಡಿರುವೆ. ನಮ್ಮದು ಸಿನಿಮಾ ಕುಟುಂಬ ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಹಾಗೂ ಸಿಸಿಬಿ ಅಧಿಕಾರಿಗಳಿಗೆ ಹೇಳಿರುವ ವಿಷಯಕ್ಕೆ ಬದ್ಧವಿರುವುದಾಗಿ ತಿಳಿಸಿದ ಇಂದ್ರಜಿತ್ ಲಂಕೇಶ್, ತಮ್ಮದೇನಿದ್ದರೂ ಪೊಲೀಸರಿಗೆ ಮಾಹಿತಿ ನಿಡೋ ಕೆಲಸ ಮಾತ್ರ ಎಂದಿದ್ದಾರೆ.