Webdunia - Bharat's app for daily news and videos

Install App

Drugs Case: ಕೇರಳದ ಖ್ಯಾತ ರಾಪರ್ ವೇದನ್ ಅರೆಸ್ಟ್‌

Sampriya
ಮಂಗಳವಾರ, 29 ಏಪ್ರಿಲ್ 2025 (19:25 IST)
Photo Credit X
ಕೊಚ್ಚಿ (ಕೇರಳ): ಜನಪ್ರಿಯ ಮಲಯಾಳಂ ರಾಪರ್, ವೇದನ್ ಎಂದೇ ಖ್ಯಾತರಾಗಿರುವ ಹಿರಾಂದಾಸ್ ಮುರಳಿ ಅವರನ್ನು ಸೋಮವಾರ ಇಲ್ಲಿನ ತ್ರಿಪುಣಿತುರಾದ ವೈಟ್ಟಿಲ ಬಳಿಯ ಅಪಾರ್ಟ್‌ಮೆಂಟ್‌ನಿಂದ ವಶಪಡಿಸಿಕೊಳ್ಳಲಾಗಿದೆ.

ಸುಮಾರು ಆರು ಗ್ರಾಂ ಗಾಂಜಾ ವಶಪಡಿಸಿಕೊಂಡ ನಂತರ ಅವರನ್ನು ಈ ಸಂಬಂಧ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಸರ್ಕಲ್ ಇನ್ಸ್‌ಪೆಕ್ಟರ್ ಎ.ಎಲ್.ಯೇಸುದಾಸ್ ಮಾತನಾಡಿ, ಫ್ಲಾಟ್‌ನಲ್ಲಿ ಗಾಂಜಾ ಪತ್ತೆಯಾಗಿದ್ದು, 9 ಲಕ್ಷ ರೂ.ಗಳು ಪತ್ತೆಯಾಗಿವೆ. ಈ ಹಣ ಕಾರ್ಯಕ್ರಮವೊಂದರ ಬುಕ್ಕಿಂಗ್ ಮೊತ್ತ ಎಂದು ವೇದನ್ ಹೇಳಿದ್ದಾರೆ. ಅದಲ್ಲದೆ ಚಿರತೆ ಹಲ್ಲು ಬಳಸಿರುವ ಬಗ್ಗೆ ಅರಣ್ಯ ಇಲಾಖೆಯೂ ವಿಚಾರಣೆ ಆರಂಭಿಸಿದೆ.

ವೇದನ್ ಡ್ರಗ್ಸ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಅವರ ಫ್ಲಾಟ್‌ನಲ್ಲಿ ಒಟ್ಟು 9 ಜನರಿದ್ದರು.

ಹಿರಾಂದಾಸ್ ಮುರಳಿ ಅವರು ವೇದನ್ ಎಂದೇ ಖ್ಯಾತಿ ಗಳಿಸಿದ್ದಾರೆ.  ಅವರು ಕೇರಳದ ಭಾರತೀಯ ರಾಪರ್ ಮತ್ತು ಗೀತರಚನೆಕಾರರಾಗಿದ್ದಾರೆ. 2020 ರ ಜೂನ್‌ನಲ್ಲಿ ಯೂಟ್ಯೂಬ್‌ನಲ್ಲಿ "ವಾಯ್ಸ್ ಆಫ್ ದಿ ವಾಯ್ಸ್‌ಲೆಸ್" ಎಂಬ ಶೀರ್ಷಿಕೆಯ ಮೊದಲ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ವೇದನ್ ಗಮನಸೆಳೆದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಮುಂದಿನ ಸುದ್ದಿ
Show comments