Webdunia - Bharat's app for daily news and videos

Install App

ನನ್ನ ಮತ್ತೊಂದು ಕುಟುಂಬ ಎಂದ ನಟ ರವಿಚಂದ್ರನ್

Webdunia
ಬುಧವಾರ, 25 ಆಗಸ್ಟ್ 2021 (09:34 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಮಲಯಾಳಂ ದೃಶ್ಯಂ 2 ಸಿನಿಮಾ ರಿಮೇಕ್ ದಶ್ಯ 2 ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.


ಈ ಹಿನ್ನಲೆಯಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ರವಿಚಂದ್ರನ್, ನಿರ್ದೇಶಕ ಪಿ. ವಾಸು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ತಮಗಿರುವ ವಿಶೇಷ ಒಲವನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ. ನನಗೆ ಇದು ಮತ್ತೊಂದು ಕುಟುಂಬವಿದ್ದಂತೆ. ಹಾಗಂತ ನಾನು ಸುಮ್ಮನೇ ಬಾಯಿ ಮಾತಿಗೆ ಹೇಳುತ್ತಿಲ್ಲ. ನಿಜವಾಗಿಯೂ ಈ ಸಿನಿಮಾ ತಂಡದಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿಯಿದೆ. ನಾಳೆಯಿಂದ ಶೂಟಿಂಗ್ ಇಲ್ಲ, ಇವರೆಲ್ಲರನ್ನೂ ಭೇಟಿಯಾಗಲು ಸಾಧ‍್ಯವಾಗುತ್ತಿಲ್ಲ ಎನ್ನುವುದೇ ಬೇಜಾರು ಎಂದಿದ್ದಾರೆ.

ಇನ್ನು, ನಾಯಕಿ ನವ್ಯಾ ನಾಯರ್ ಕೂಡಾ ಇದೇ ಮಾತನ್ನು ಹೇಳಿದರು. ನಾನು ಈ ತಂಡವನ್ನು ಮಿಸ್ ಮಾಡಿಕೊಳ್ಳಲಿದ್ದೇನೆ ಎಂದರು. ಇನ್ನು, ರವಿಚಂದ್ರನ್ ಸರ್ ಜೊತೆಗೆ ಕೆಲಸ ಮಾಡಿದ್ದು, ತುಂಬಾ ಖುಷಿಯಾಗಿದೆ. ಮುಂದೊಂದು ದಿನ ರವಿಚಂದ್ರನ್ ಸರ್ ಜೊತೆ ಉತ್ತಮ ಪಾತ್ರ ಸಿಕ್ಕರೆ ಖಂಡಿತಾ ಮತ್ತೆ ನಟಿಸುತ್ತೇನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments