ಸ್ಯಾಂಡಲ್ ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅವರು ನಿನ್ನೆ ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ಮೊನ್ನೆ ಮಧ್ಯರಾತ್ರಿಯಿಂದಲೇ ಶಿವರಾಜ್ ಕುಮಾರ್ ಅವರ ಮನೆ ಬಳಿ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ರು. 80 ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ರು.
ಇನ್ನು ಶಿವಣ್ಣ ತಮ್ಮ ಮನೆಯೊಂದಿಗೆ ಬರ್ತಡೇ ಆಚರಿಸಿಕೊಂಡ್ರು. ನಾಗವಾರದಲ್ಲಿರುವ ಮನೆಯಲ್ಲಿ ಪತ್ನಿ, ಮಕ್ಕಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡರು. ಸ್ಯಾಂಡಲ್ ವುಡ್‌ನ ಅನೇಕ ತಾರೆಯರು ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಶುಭಾಶಯ ಕೋರಿದ್ರು. ದುನಿಯಾ ಸೂರಿ, ಮಧು ಬಂಗಾರಪ್ಪ, ಮಾನ್ವಿತಾ ಹರೀಶ್ ಮುಂತಾದವರು ಶಿವಣ್ಣನ ಮನೆಗೆ ಆಗಮಿಸಿ ಶುಭಾಶಯ ಕೋರಿದರು. ಬಳಿಕ ತಂದೆಯ ಸಮಾಧಿಗೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.
ಶಿವರಾಜ್ ಕುಮಾರ್ ಅಭಿನಯದ ಸಂತ ಕಬೀರ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಇದುವೆರೆಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಮಾಡಿದ್ದು ಅಭಿಮಾನಿಗಳು ಈ ಸಿನಿಮಾದ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಇನ್ನು ಶಿವಣ್ಣ ಹಾಗೂ ಸುದೀಪ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಕಲಿ ಸಿನಿಮಾ ಕೂಡ ಆಗಸ್ಟ್ ನಲ್ಲಿ ಸೆಟ್ಟೇರಲಿದೆಯಂತೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.