Select Your Language

Notifications

webdunia
webdunia
webdunia
webdunia

ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಡಾ.ರಾಜ್

ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಡಾ.ರಾಜ್
ಕಲಬುರಗಿ , ಮಂಗಳವಾರ, 25 ಫೆಬ್ರವರಿ 2020 (20:11 IST)
ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಒಬ್ಬ ಮೇರು ನಟನಾಗಿ ತಮ್ಮ ನಟನೆಯ ಜೊತೆ ತಮ್ಮ ಸಹ ನಟ-ನಟಿರೊಂದಿಗೆ ಹಾಗೂ ತಂತ್ರಜ್ಞರೊಂದಿಗೆ ತುಂಬಾ ಪ್ರೀತಿಯಿಂದ ಬೆರೆಯುತ್ತ ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೆಚ್.ಎಂ.ಮಹೇಶ್ವರಯ್ಯ ಬಣ್ಣಿಸಿದರು.

ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಹಾಗೂ ಕಲಬುರಗಿಯ ರಂಗಾಯಣದ ಸಂಯುಕ್ತಾಶ್ರಯದಲ್ಲಿ ನಡೆಯುವ 30 ದಿನಗಳ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕುಮಾರ ಅವರ ಸಿನಿಮಾ ನೋಡುತ್ತಾ ಬೆಳೆದ ಅನುಭವವನ್ನು ಹಂಚಿಕೊಂಡ ಕುಲಪತಿಗಳು, ಸಿನೆಮಾಗಳು ಕನ್ನಡ, ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರು.

ಸಿನಿಮೋತ್ಸವದಿಂದ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಒತ್ತಡವನ್ನು ನಿವಾರಿಸಲು ಹಾಗೂ ಕನ್ನಡ ಸಿನಿಮಾಗಳನ್ನು ವೀಕ್ಷಿಸುವದರಿಂದ ಭಾಷೆ, ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಹೊಂದಲು ಅನುಕೂಲವಾತ್ತದೆ ಎಂದರು. ಇದೇ ಸಂದರ್ಭದಲ್ಲಿ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಗೀತ, ಜರ್ಮನ್, ಜಪಾನೀಸ್, ಅರೇಬಿಕ್ ಹಾಗೂ ಸ್ಪ್ಯಾನಿಶ್ ಭಾಷೆಗಳ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಫೆಬ್ರವರಿ 24 ರಿಂದ ಮಾರ್ಚ 23 ರ ವರೆಗೆ ನಡೆಯುವ 30 ದಿನಗಳ ಸಿನಿಮೋತ್ಸವದಲ್ಲಿ ಡಾ.ರಾಜಕುಮಾರವರ 22 ಸಿನಿಮಾಗಳನ್ನು ಪ್ರದರ್ಶಿಸಲಿದ್ದು, ಮಾರ್ಚ 24ರಂದು ಮುಕ್ತಾಯಗೊಳ್ಳಲಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕಾಣದಂತೆ ಮಾಯಾವಾದನು' ಸಿನಿಮಾ ರಿಲೀಸ್ ಆದ್ಮೇಲು ಹಾಡುಗಳದ್ದೇ ಅಬ್ಬರ..!