Select Your Language

Notifications

webdunia
webdunia
webdunia
webdunia

ಪತ್ನಿ ಜೊತೆ ಮರಾಠಿ ಸಿನಿಮಾ ಮಾಡೋ ಆಸೆ ನನ್ಗೆ ಅಂತಿದ್ದಾರೆ ರಿತೇಶ್

ಪತ್ನಿ ಜೊತೆ ಮರಾಠಿ ಸಿನಿಮಾ ಮಾಡೋ ಆಸೆ ನನ್ಗೆ ಅಂತಿದ್ದಾರೆ ರಿತೇಶ್
, ಸೋಮವಾರ, 11 ಜುಲೈ 2016 (08:31 IST)
ತೆರೆ ಮೇಲೆ ರೋಮ್ಯಾನ್ಸ್ ಮಾಡಿ ನಿಜ ಜೀವನದಲ್ಲೂ ನಾವಿಬ್ಬರು ಜೋಡಿ ಹಕ್ಕಿಗಳಾಗುತ್ತಿದ್ದೇವೆ ಅಂತಾ ಅಭಿಮಾನಿಗಳಿಗೆ ಶಾಕ್ ಕೊಟ್ಟ ಕ್ಯೂಟ್ ಕಪಲ್ಸ್ ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ. ಈ ಮುದ್ದಾದ ಜೋಡಿ ಇನ್ನೇನು ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಸಿನಿಮಾಗಳನ್ನು ಕೊಡುತ್ತಾರೆ ಅಂತಾ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿರುವಾಗಲೇ ಜೆನಿಲಿಯಾ ಹಾಗೂ ರಿತೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ರು. ಸಿನಿಮಾದಿಂದಲೂ ದೂರವಾದ್ರು.

 
ರಿತೇಶ್ ದೇಶ್ ಮುಖ್ ಅವರನ್ನು ವಿವಾಹವಾದ ಬಳಿಕ ಜೆನಿಲಿಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳೋದು ಅಪರೂಪವಾಯ್ತು. ಅಷ್ಟರಲ್ಲೇ ಗಂಡುಮಗುವಿನ ತಾಯಿಯಾದ್ರು. ಇದೀಗ ಮತ್ತೆ ಮೊನ್ನೆ ತಾನೇ ಎರಡನೇ ಮಗುವಿನ ತಾಯಿಯಾದ್ರು. ಹಾಗಾಗಿ ಜೆನಿಲಿಯಾ ಇನ್ನು ಸಿನಿಮಾದಲ್ಲಿ ಅಭಿನಯಿಸೋದು ಅಷ್ಟರಲ್ಲೇ ಇದೆ ಅಂತಾ ಅಭಿಮಾನಿಗಳು ಅಂದುಕೊಂಡಿದ್ರು.ಅಷ್ಟರಲ್ಲೇ ರಿತೇಶ್ ದೇಶ್ ಮುಖ್ ಅವರು ಅಭಿಮಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ನಾನು ನನ್ನ ಪತ್ನಿಯೊಂದಿಗೆ ಮರಾಠಿ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆ ಅಂತಾ ಹೇಳಿದ್ದಾರೆ. ನಾನು ಇದುವರೆಗೂ ಆಕೆಯೊಂದಿಗೆ ಕೆಲವು ಸಿನಿಮಾ ಮಾಡಿದ್ದೇನೆ. ಆಕೆ ನನ್ನ ಇಷ್ಟದ ಕೋ ಸ್ಟಾರ್ ಅಂತಾ ರಿತೇಶ್ ಹೇಳಿದ್ದಾರೆ.
  
ನಾನು ಜೆನಿಲಿಯಾ ಅವರೊಂದಿಗೆ ಕೆಲಸ ಮಾಡೋದನ್ನು ತುಂಬಾನೇ ಎಂಜಾಯ್ ಮಾಡುತ್ತೇನೆ.ಆಕೆ ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದ್ದಾಳೆ. ಅವಳು ಮರಾಠಿ ಸಿನಿಮಾದಲ್ಲೂ ಅಭಿನಯಿಸಬೇಕು ಅನ್ನೋದು ನನ್ನ ಆಸೆ. ಈಗಾಗಲೇ ಮೂರು ಮರಾಠಿ ಸಿನಿಮಾಗಳು ನನ್ನ ಕೈಯಲ್ಲಿವೆ.ಅದರಲ್ಲಿ ಒಂದನ್ನು ನಾನೇ ನಿರ್ಮಾಣ ಮಾಡುತ್ತೇನೆ ಅಂತಾ ರಿತೇಶ್ ಹೇಳಿದ್ದಾರೆ. ಸದ್ಯ ತಾಯ್ತನದ ಖುಷಿಯಲ್ಲಿರುವ ಜೆನಿಲಿಯಾ ಮರಾಠಿ ಸಿನಿಮಾದ ಮೂಲಕ ಕಮ್ ಬ್ಯಾಕ್ ಆದ್ರು ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕತ್ರೀನಾ ಕೈಫ್ ಅವರೊಂದಿಗೆ ಇನ್ನೊಂದು ಸಿನಿಮಾ ಮಾಡಬೇಕು-ಅಲಿ ಅಬ್ಬಾಸ್ ಜಾಫರ್