Select Your Language

Notifications

webdunia
webdunia
webdunia
webdunia

ಹೊಸ ದಾಖಲೆಗೆ ಸಾಕ್ಷಿಯಾಗಲಿದೆ ದೊಡ್ಮನೆ ಹುಡುಗ ಸಿನಿಮಾ

ಹೊಸ ದಾಖಲೆಗೆ ಸಾಕ್ಷಿಯಾಗಲಿದೆ ದೊಡ್ಮನೆ ಹುಡುಗ ಸಿನಿಮಾ
, ಗುರುವಾರ, 23 ಜೂನ್ 2016 (09:49 IST)
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ ಅಂದ್ರೆ ಅದು ದೊಡ್ಮನೆ ಹುಡುಗ ಸಿನಿಮಾ. ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಅಭಿಮಾನಿಗಳಲ್ಲಿ ಈಗ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಅಲ್ಲದೇ ದಾಖಲೆಯೊಂದಕ್ಕೆ  ಈ ಸಿನಿಮಾ ಸಾಕ್ಷಿಯಾಗುತ್ತಿದೆ.
 
ಅಂದ್ಹಾಗೆ ದೊಡ್ಮನೆ ಹುಡ್ಗ ಸಿನಿಮಾದಲ್ಲಿ ಅಂತಹದ್ದೇನಿದೆ ಅಂತಾ ಯೋಚಿಸುತ್ತಿದ್ದೀರಾ. ಈ ಸಿನಿಮಾದ ಅಭಿಮಾನಿಗಳೇ ನಮ್ಮನೆ ದೇವ್ರು ಅನ್ನೋ ಹಾಡು ಇದೀಗ ದಾಖಲೆಗೆ ಸಾಕ್ಷಿಯಾಗುತ್ತಿದೆ. ತುಂಬಾನೇ ಅದ್ಧೂರಿಯಾಗಿ ಈ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಬರೋಬ್ಬರಿ ಒಂದು ಕೋಟಿ 75 ಲಕ್ಷ ರೂಪಾಯಿ ಖರ್ಚು ಮಾಡಿ ಈ ಸಾಂಗ್ ನ್ನು ಶೂಟ್ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲೇ ಇದೊಂದು ವಿಭಿನ್ನವಾದ ಹಾಡಂತೆ. ಸದ್ಯ ಬಳ್ಳಾರಿಯ ದುರ್ಗಮ್ಮ ದೇವಿ ಮೈದಾನದಲ್ಲಿ ಹಾಡಿನ ಕೆಲವು ಭಾಗದ ಚಿತ್ರೀಕರಣ ಮಾಡಲಾಯ್ತು. ಇನ್ನು ಹೊಸಪೇಟೆ, ಚಿತ್ರದುರ್ಗ ಹಾಗೇ ಹುಬ್ಬಳ್ಳಿ , ಬೆಂಗಳೂರಿನಲ್ಲೂ ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ.
 
ಅಂದ್ಹಾಗೆ ಇದು ಪುನೀತ್ ರಾಜ್ ಕುಮಾರ್ ಅವರ ವೃತ್ತಿ ಬದುಕಿನ ಸ್ಪೆಷಲ್ ಸಾಂಗ್. ಸತ್ಯ ಹೆಗಡೆ ಅವರ ಸಾರಥ್ಯದಲ್ಲಿ 19 ಮಂದಿ ಕ್ಯಾಮೆರಾ ಮೆನ್ ಗಳು ಈ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ. ಇನ್ನು 100 ತಂತ್ರಜ್ಞರ ಸಹಾಯದಿಂದ 10 ಸಾವಿರ ಅಭಿಮಾನಿಗಳ ಮುಂದೆ ಹಾಡಿನ ಚಿತ್ತೀಕರಣ ಮಾಡಲಾಯ್ತು. 500 ಜನ ಪೊಲೀಸರ ಬಿಗಿ ಬಂದೋಬಸ್ತ್ ನ ನಡುವೆ ಹಾಡಿನ ಶೂಟಿಂಗ್ ಮಾಡಲಾಯ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಲಿಯಾ ಭಟ್ ಬಗ್ಗೆ ಭಯಪಡುತ್ತಿದ್ದಾರಾ ಅನುಷ್ಕಾ ಶರ್ಮಾ?