Select Your Language

Notifications

webdunia
webdunia
webdunia
webdunia

ಆಲಿಯಾ ಭಟ್ ಬಗ್ಗೆ ಭಯಪಡುತ್ತಿದ್ದಾರಾ ಅನುಷ್ಕಾ ಶರ್ಮಾ?

ಆಲಿಯಾ ಭಟ್ ಬಗ್ಗೆ ಭಯಪಡುತ್ತಿದ್ದಾರಾ ಅನುಷ್ಕಾ ಶರ್ಮಾ?
, ಗುರುವಾರ, 23 ಜೂನ್ 2016 (09:47 IST)
ಬಣ್ಣದ ಲೋಕ ಅಂದ್ರೇನೇ ಹಾಗೆ. ಇಲ್ಲಿ ಪರಸ್ಪರ ಹೊಟ್ಟೆ ಉರಿ, ಜಗಳ , ವೈರತ್ವ ಮಾಮೂಲಿ. ಅದರಲ್ಲೂ ಬೆಳೆಯುತ್ತಿರುವ ನಟ ನಟಿಯರ ಮಧ್ಯೆ ಯಾವತ್ತೂ ಪೈಪೋಟಿ ಇದ್ದೇ ಇರುತ್ತೆ.  ಅದರಲ್ಲೂ ನಟಿಯರ ಮಧ್ಯೆ ಈ ರೀತಿ ಜಗಳಗಳು, ಮೈಮನಸ್ಸುಗಳು ಮಾಮೂಲಿ. ಇದೀಗ ಅನುಷ್ಕಾ ಶರ್ಮಾ ಹಾಗೂ ಆಲಿಯಾ ಭಟ್ ವಿಚಾರದಲ್ಲೂ ಇದೇ ಮಾತುಗಳು ಕೇಳಿ ಬರುತ್ತಿವೆ.

ಹೌದು...ಅನುಷ್ಕಾ ಶರ್ಮಾ ಅವರು ಆಲಿಯಾ ಭಟ್ ಅವರ ಬಗ್ಗೆ ಭಯ ಪಡ್ತಿದ್ದಾರೆ ಅನ್ನೋದಕ್ಕೆ ಕಾರಣ ಕೂಡ ಇದೆ.ಅದೇನಪ್ಪಾ ಅಂದ್ರೆ  ಸುಲ್ತಾನ್ ಸಿನಿಮಾದಲ್ಲಿ ಜಾಗ್ ಗೂಮಿಯಾ ಅನ್ನೋ ಹಾಡೊಂದಿದೆ. ಈ ಹಾಡಿನ ಚಿತ್ರೀಕರಣವನ್ನು ಬಾರ್ ಒಂದರಲ್ಲಿ ಚಿತ್ರೀಕರಣ ಮಾಡೋದಕ್ಕೆ ಪ್ಲಾನ್ ಮಾಡಲಾಗಿತ್ತಂತೆ. ಇದೀ ರೀತಿಯ ಸಮಜ್ವಾನ್ ಅನ್ನೋ ಹಾಡಿಗೆ ಆಲಿಯಾ ಭಟ್ ಇದೇ ರೀತಿ ಹೆಜ್ಜೆ ಹಾಕಿದ್ರಂತೆ. ಅದನ್ನು ಅನುಷ್ಕಾ ಶರ್ಮಾ ಅವರಿಗೆ ಸಿನಿಮಾ ತಂಡದವರು ತಿಳಿಸಿದ್ರಂತೆ.ಇದಕ್ಕೆ ಕೋಪಗೊಂಡ ಅನುಷ್ಕಾ ಶರ್ಮಾ ಅವರು ಯಾವುದೇ ಕಾರಣಕ್ಕೂ ನನ್ನನ್ನು ಆಲಿಯಾ ಜೊತೆ ಹೋಲಿಕೆ ಮಾಡಬೇಡಿ ಅಂತಾ ಹೇಳಿದ್ರಂತೆ.
 
ಇನ್ನು ಅನುಷ್ಕಾ ಶರ್ಮಾ ಅವರು ಹೀಗೆ ಕೋಪ ಮಾಡಿಕೊಳ್ಳೋದಕ್ಕೆ ಇನ್ನೊಂದು ಕಾರಣ ಕೂಡ ಇದೆ. ಅದೇನಪ್ಪಾ ಅಂದ್ರೆ ಸದ್ಯ ಬಾಲಿವುಡ್ ನಲ್ಲಿ ಆಲಿಯಾಗೆ ಒಳ್ಳೊಳ್ಳೆ ಆಫರ್ ಗಳು ಬರುತ್ತಿವೆ. ದೊಡ್ಡ ದೊಡ್ಡ ನಟರೊಂದಿಗೆ ಅವರು ಅಭಿನಯಿಸುತ್ತಿದ್ದಾರೆ.ಆಲಿಯಾ ತನ್ನ ಸಣ್ಣ ವಯಸ್ಸಿನಲ್ಲೇ ಇಷ್ಟೆಲ್ಲಾ ಸಿನಿಮಾಗಳನ್ನು ಬಾಚಿಕೊಳ್ಳುತ್ತಿರೋದು ನೋಡಿ ಅನುಷ್ಕಾ ಶರ್ಮಾ ಅವರ ಆತಂಕಗೊಂಡಿದ್ದಾರೆ ಅಂತಾ ಬಾಲಿವುಡ್ ಮಂದಿ ಗುಸು ಗುಸು ಮಾತನಾಡುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಣ್‌ವೀರ್ ದೀಪಿಕಾ ಪಡುಕೋಣೆ ಬ್ರೇಕ್ ರೂಮರ್ ಬಗ್ಗೆ ದೀಪಿಕಾ ಹೇಳಿದ್ದೇನು?