ಟ್ವೀಟರ್ ನಲ್ಲಿ ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದು ಯಾಕೆ ಗೊತ್ತಾ?

Webdunia
ಶುಕ್ರವಾರ, 6 ಜುಲೈ 2018 (09:41 IST)
ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ವೀಟರ್ ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈಗ ಆ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ ವ್ಯಕ್ತಿ ಯಾಕೆ ಟ್ವೀಟರ್ ನಲ್ಲಿ ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ್ದೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.


ನಟ ಪುನೀತ್ ಅವರು ಫೇಸ್ ಬುಕ್ ಅಕೌಂಟ್ ಮಾತ್ರ ಹೊಂದಿದ್ದರು. ಟ್ವೀಟರ್ ನಲ್ಲಿ ಇದುವರೆಗೆ ಅಕೌಂಟ್ ಕ್ರಿಯೆಟ್ ಮಾಡಿಲ್ಲ.  ಆದರೆ ಈಗ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ವೀಟರ್ ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದು, ಈ ಖಾತೆಯನ್ನು ಎಷ್ಟೋ ಜನರು ಹಾಗೂ ಕೆಲವು ಸೆಲೆಬ್ರೆಟಿಗಳೂ ಸಹ ಪುನೀತ್  ಅವರ ಖಾತೆ ಎಂದುಕೊಂಡು ಫಾಲೋ ಮಾಡುತ್ತಿದ್ದಾರೆ, ಆದರೆ ಇದು ಫೇಕ್ ಎಂದು ತಿಳಿದ ಮೇಲೆ ಈ ಅಕೌಂಟ್ ನ್ನು ಕ್ರಿಯೆಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಅನೇಕರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಹಾಗೇ ಪುನೀತ್ ಅವರು ಕೂಡ ಆ ಅಕೌಂಟ್ ಫೇಕ್ ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.


ಆದರೆ ಈಗ ಆ ಫೇಕ್ ಅಕೌಂಟ್ ಕ್ರಿಯೆಟ್ ಮಾಡಲು ಕಾರಣವೆನೆಂಬುದನ್ನು ಸ್ವತಃ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದಾನೆ. ‘’ಹಾಯ್ ನಮಸ್ಕಾರ ಎಲ್ಲರಿಗೂ. ನಾನು ಮೊದಲಿಗೆ #ಅಪ್ಪು ಸರ್ ಗೆ ಕ್ಷಮೆ ಕೇಳುತ್ತೇನೆ. ನಂತರ ಅಪ್ಪು ಅಭಿಮಾನಿ ಗಳಿಗೆ ಕ್ಷಮೆ ಕೇಳುತ್ತೇನೆ. ಈ ಫೇಕ್ ಖಾತೆ ತೆಗೆದಿರುವ ಉದ್ದೇಶ ಇಷ್ಟೇ, ಅಪ್ಪು ಸರ್ ಈ ತರಹದ ತಮ್ಮ ಹೆಸರಿನಲ್ಲಿ ಫೇಕ್ ಖಾತೆ ನೊಡಿಯಾದ್ರು #Twitter ಬರಬಹುದೇನೋ ಅಂತಾ ಅಷ್ಟೇ. ಕೆಟ್ಟ ಉದ್ದೇಶ ಏನು ಇಲ್ಲ’’ ಎಂದು ತಿಳಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಕಾಮಿಡಿ ಕಿಲಾಡಿಗಳಿಂದಲೂ ಮಾಸ್ಟರ್ ಆನಂದ್ ಹೊರಬಂದ್ರಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಮುಂದಿನ ಸುದ್ದಿ
Show comments