Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ನೀಡಲಿರುವ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ನೀಡಲಿರುವ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?
ಬೆಂಗಳೂರು , ಬುಧವಾರ, 15 ಆಗಸ್ಟ್ 2018 (09:59 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಇನ್ನೇನು ಹತ್ತಿರವಾಗ್ತಾ ಇದೆ. ಅಂದು ಅವರ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ಸ್ಪೆಷಲ್ ಗಿಪ್ಟ್ ವೊಂದನ್ನು ರೆಡಿಮಾಡಲಿದೆಯಂತೆ.


 ಹೌದು. ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬವನ್ನು  ಸಪ್ಟೆಂಬರ್ 2 ರಂದು ಆಚರಿಸಿಕೊಳ್ಳಲಿದ್ದು, ಅಂದು ಕೋಟಿಗೊಬ್ಬ-3 ಚಿತ್ರದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಹಾಗೇ ಈಗಾಗಲೇ ಚಿತ್ರದ ಶೂಟಿಂಗ ಕೂಡ ಭರದಿಂದ ಸಾಗಿದ್ದು, ಈ ಸಿನಿಮಾವನ್ನ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


ಕೋಟಿಗೊಬ್ಬ- 3 ಸಿನಿಮಾ ಸೂರಪ್ಪ ಬಾಬು ನಿರ್ಮಿಸುತ್ತಿದ್ದು, ಶಿವ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಈ ಚಿತ್ರದಲ್ಲಿ ಸುದೀಪ್, ಮಡ್ಡೋನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರ ಇದಾಗಿದೆ. ಆ ಕಾರಣಕ್ಕೆ ವಿದೇಶದಲ್ಲಿಯೇ ಹೆಚ್ಚು ಭಾಗ ಶೂಟಿಂಗ್ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಸಂತ್ರಸ್ತರಿಗೆ ನೆರವು ನೀಡಿದ ಪುನೀತ್ ರಾಜ್ ಕುಮಾರ್