Webdunia - Bharat's app for daily news and videos

Install App

ಲೀವಿಂಗ್ ಟುಗೆದರ್‌ನಲ್ಲಿದ್ದ ಮತ್ತೊಂದು ರಾಜ ರಾಣಿ ಜೋಡಿ ಮಧ್ಯೆ ಬಿರುಕು, ಜಯಶ್ರೀ ನೀಡಿದ ಸ್ಪಷ್ಟನೆ ಏನು ಗೊತ್ತಾ

Sampriya
ಮಂಗಳವಾರ, 5 ನವೆಂಬರ್ 2024 (13:49 IST)
Photo Courtesy X
ರಾಜ ರಾಣಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ನಿವೇದಿತಾ ಹಾಗೂ ಚಂದನ್ ಗೌಡ ದೂರವಾದ ಬೆನ್ನಲ್ಲೇ ಇದೀಗ ಮತ್ತೊಂದು ಜೋಡಿ ದೂರವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಜಯಶ್ರೀ ಆರಾಧ್ಯ ಮತ್ತು ಸ್ಟೀವನ್ ಜೋಡಿ ರಾಜ ರಾಣಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಮದುವೆಯಾಗದೆಯೇ ಈ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಕ್ಕೆ ಅನೇಕರು ವಿರೋಧವನ್ನು ವ್ಯಕ್ತಪಡಿಸಿದ್ದರು. ಮದುವೆಯಾಗದಿದ್ದರು ನಾವು ಗಂಡ ಹೆಂಡತಿನೇ ಎಂದು ಹೇಳಿವ ಮೂಲಕ ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ ಇದೀಗ ಈ ಜೋಡಿ ದೂರವಾಗುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಲಿವಿಂಗ್ ರಿಲೇಶನ್‌ ಶಿಪ್‌ನಲ್ಲಿದ್ದ ಈ ಜೋಡಿ, ದಿ ಗ್ಲಾಮ್ ರೂಮ್ ಎನ್ನುವ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಇವರು ಆಗಾಗ ತಮ್ಮ ರೋಮ್ಯಾಂಟಿಕ್ ರೀಲ್ಸ್ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಇವರಿಬ್ಬರು ದೂರವಾಗಿರುವ ಬಗ್ಗೆ  ಸ್ವತಃ ಜಯಶ್ರೀ ಆರಾಧ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

ಹೌದು, ನೀವು ಕೇಳುತ್ತಿರುವ ಗಾಳಿ ಮಾತುಗಳು ಸತ್ಯ, ನನ್ನ ಬಾಯ್‌ಫ್ರೆಂಡ್‌ನಿಂದ (ಸ್ಟೀವನ್) ದೂರ ಆಗಿದ್ದೀನಿ. ಇನ್ನು ಮುಂದೆ ದಿ ಗ್ಲಾಮರ್ ರೂಮ್‌ಗೆ ಸಂಬಂಧಪಟ್ಟ ಮಾಹಿತಿಗೆ ನನ್ನನ್ನು ಸಂಪರ್ಕ ಮಾಡಿ. ಇಲ್ಲವಾದರೆ 'ದಿ ಗ್ಲಾಮ್ ರೂಮ್' ತಂಡವನ್ನು ಸಂಪರ್ಕಿಸಿ. ನಾನು ಕಟ್ಟಿರುವ ಗ್ಲಾಮ್ ರೂಮ್ ಸಂಸ್ಥೆ ಯಾವುದೇ ಪಾರ್ಟನರ್‌ಶಿಪ್ ಅಥವಾ ಹೂಡಿಕೆದಾರರ ಮೇಲೆ ನಡೆಯುತ್ತಿರಲಿಲ್ಲ. ಇದಕ್ಕೆ ಹಣವನ್ನು ಬ್ಯಾಂಕ್ ಲೋನ್ ಮುಖಾಂತರ ಹೊಂದಿಸಿದ್ದೆ, ಅದನ್ನು ನಾನೇ ಕಟ್ಟುತ್ತಿರುವುದು. ಹಿಂದೆ ಮತ್ತು ಮುಂದೆ ಕೂಡ ನಾನೇ ಕಟ್ಟುವುದು. ಇದುವರೆಗೂ ನೀವು ನನ್ನ ಮೇಲೆ ತೋರಿಸಿರುವ ಪ್ರೀತಿ, ಕಾಳಜಿ ಮತ್ತು ಸಹನೆಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು ಜಯಶ್ರೀ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದಿನ ಸುದ್ದಿ
Show comments