Webdunia - Bharat's app for daily news and videos

Install App

ನೋಟಿಸ್ ಪಡೆದ ನಟಿ ವೈಷ್ಣವಿ ಗೌಡ ಮಾಡಿದ ತಪ್ಪೇನು ಗೊತ್ತಾ

Sampriya
ಸೋಮವಾರ, 13 ಮೇ 2024 (15:38 IST)
photo Courtesy Instagram
ನಟಿ ವೈಷ್ಣವಿ ಗೌಡ ಅವರು ಸೀತಾ ರಾಮ ಸೀರಿಯಲ್ ಪಾತ್ರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಸೀರಿಯಲ್ ಪಾತ್ರದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಇದೀಗ ವೈಷ್ಣವಿ ಅವರು ರಿಯಲ್ ಜೀವನದಲ್ಲಿ ಸಂಕಷ್ಟ ಎದುರಿಸಿದ್ದಾರೆ.

ಧಾರವಾಹಿಯಲ್ಲಿ ಸೀತಾ ಪಾತ್ರದಲ್ಲಿ ನಿರ್ವಹಿಸುವಾಗ ಸ್ನೇಹಿತೆ ಜತೆ ಪ್ರಯಾಣಿಸುತ್ತಿರುವಾಗ ಹೆಲ್ಮೇಟ್ ಹಾಕದಿದ್ದಕ್ಕೆ ಅವರ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ.  

ಜಯಪ್ರಕಾಶ್ ಎಕ್ಕೂರು ಎಂಬವವರು  ಈ ಸಂಬಂಧ ಧಾರವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ಝೀ ವಾಹಿನಿ ಮೇಲೆ ಕ್ರಮ ಜರುಗಿಸಬೇಕು ಎಂದು  ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಮಂಗಳೂರು ಪೊಲೀಸರು ಬಳಿಕ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಪ್ರಕರಣವನ್ನು  ವರ್ಗಾವಣೆ ಮಾಡಿದ್ದರು. ಬಳಿಕ ಜೀ ವಾಹಿನಿ ಮತ್ತು ನಟಿ ವೈಷ್ಣವಿ ಗೌಡ ಅವರಿಗೆ ಪೊಲೀಸ್‌ ನೋಟಿಸ್ ಜಾರಿ ಮಾಡಲಾಗಿತ್ತು.

ಧಾರವಾಹಿ ಚಿತ್ರೀಕರಣವು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಈ ಪ್ರಕರಣವನ್ನು ರಾಜಾಜಿನಗರ ಪೊಲೀಸ್ ಠಾಣೆಗೆ  ವರ್ಗಾವಣೆ ಮಾಡಿದ್ದು, ಇದರಂತೆ ನಟಿಗೆ ವಾರ್ನಿಂಗ್ ಕೊಟ್ಟ ಸಂಚಾರಿ ಪೊಲೀಸರು 500 ರೂ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಬಳಿಕ ಮತ್ತೊಂದು ಬಿಗ್ ಸ್ಟಾರ್ ಸಿನಿಮಾಗೆ ನಾಯಕಿಯಾದ ರುಕ್ಮಿಣಿ ವಸಂತ್

ದಿಡೀರ್ ಆಗಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟ ರಾಜ್ ಬಿ ಶೆಟ್ಟಿ

ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

ಜೈಲು ಪಾಲಾದ ದರ್ಶನ್ ಪತ್ನಿಗೆ ಅಶ್ಲೀಲ ಕಮೆಂಟ್ಸ್‌: ವಿಜಯಲಕ್ಷ್ಮಿಗೆ ಮಹಿಳಾ ಆಯೋಗ ಅಭಯ

26 ವರ್ಷಗಳ ಬಳಿಕ ಮನೆಗೆ ಮಗ ಬಂದ: ಮಗನ ಆಗಮಕ್ಕೆ ಖುಷಿಯಾದ ನಟಿ ನವ್ಯಾ ನಾರಾಯಣ್‌

ಮುಂದಿನ ಸುದ್ದಿ
Show comments