Publish Date: Fri, 19 Jan 2018 (06:51 IST)
Updated Date: Fri, 19 Jan 2018 (06:57 IST)
ಬೆಂಗಳೂರು : ಇತ್ತಿಚೆಗೆ ಚಿತ್ರರಂಗದ ನಟರ ನಡುವೆ ಭಾರಿ ಪೈಪೋಟಿಯಿದ್ದು, ಒಬ್ಬ ನಟನನ್ನು ಮತ್ತೊಬ್ಬ ನಟ ಮೆಚ್ಚಿಕೊಳ್ಳುವುದೇ ಅಪರೂಪವಾಗಿದೆ. ಆದರೆ ಈ ಮಧ್ಯ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನವರಸ ನಾಯಕ ಜಗ್ಗೇಶ್ ಅವರ ಅಭಿನಯವನ್ನು ಹೊಗಳಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ನೆಚ್ಚಿನ ನಟ ಜಗ್ಗೇಶ್ ಅವರಂತೆ. ಮೊದಲಿನಿಂದಲೂ ಪುನೀತ್ ಅವರು ಜಗ್ಗೇಶ್ ಅವರ ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದರಂತೆ. ಅವರ ಚಿತ್ರ ಬಿಡುಗಡೆಯಾದ ತಕ್ಷಣ ಅದನ್ನು ಒಂದೆರಡು ಬಾರಿಯಲ್ಲ, ಅನೇಕ ಬಾರಿ ನೋಡುತ್ತಿದ್ದರಂತೆ. ಪುನೀತ್ ಅವರು ಲೆಕ್ಕವಿಡಲಾರದಷ್ಟು ಸಲ ನೋಡಿದ ಜಗ್ಗೇಶ್ ಅವರ ಚಿತ್ರವೆಂದರೆ ತರ್ಲೆ ನನ್ಮಗ ಚಿತ್ರವಂತೆ. ಅದೇರೀತಿ ಎದ್ದೇಳು ಮಂಜುನಾಥ ಹಾಗು ನೀರ್ ದೋಸೆ ಚಿತ್ರವನ್ನು ಕೂಡ ಅನೇಕ ಬಾರಿ ನೋಡಿರುವುದಾಗಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ಜಗ್ಗೇಶ್ ಅವರ ದೊಡ್ಡ ಅಭಿಮಾನಿ ಎಂಬುದರಲ್ಲಿ ಸಂಶಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ