Select Your Language

Notifications

webdunia
webdunia
webdunia
webdunia

ಸುಳ್ಳುಸುದ್ದಿ ನಂಬಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ: ಶಿವರಾಜ್ ಕುಮಾರ್

ಪಾರ್ವತಮ್ಮ ರಾಜಕುಮಾರ್
ಬೆಂಗಳೂರು , ಶನಿವಾರ, 20 ಮೇ 2017 (12:44 IST)
ಅಮ್ಮನ ಆರೋಗ್ಯ ನಿನ್ನೆ ಹೇಗಿತ್ತೋ ಹಾಗೇ ಇದೆ. ಯಾವುದೇ ಬದಲಾವಣೆಯಾಗಿಲ್ಲ ಸುಳ್ಳುಸುದ್ದಿ ನಂಬಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪಾರ್ವತಮ್ಮ ರಾಜಕುಮಾರ್ ಪುತ್ರ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.
 
ಅಪ್ಪಾಜಿಯನ್ನೇ ನಿಮ್ಮ ಮುಂದೆ ಇಟ್ಟಿದ್ವಿ. ಇನ್ನು ಅಮ್ಮನ ಬಗ್ಗೆ ಹೇಳೋದಿಲ್ವಾ? ದಯವಿಟ್ಟು ಉಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ.
 
ಯಾರೋ ಏನೋ ಹೇಳ್ತಾರೆ ಅಂದು ತಲೆಕೆಡಿಸಿಕೊಳ್ಳಬೇಡಿ. ಅಮ್ಮ ಚೆನ್ನಾಗಿಲ್ಲದಿದ್ರೆ ನಾವು ಹೇಗೆ ಇರೋಕೆ ಸಾಧ್ಯನಾ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.
 
ಅಮ್ಮನ ಆರೋಗ್ಯದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನೀಡುತ್ತೇವೆ. ಇದರಲ್ಲಿ ಮುಚ್ಚಿಡುವ ಯಾವುದೇ ಪ್ರಶ್ನೆಯಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ನಟ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಟ ಪ್ರಭಾಸ್ ಗೆ ಹೆಣ್ಣು ಕೊಡಿ ಎಂದು ಜಾಹೀರಾತು ನೀಡಿದ ರಾಣಾ!