Select Your Language

Notifications

webdunia
webdunia
webdunia
webdunia

ಫೆ.17ರಂದು ಚಿಕ್ಕಮಗಳೂರಿನಲ್ಲಿ ಸಿಂಪಲ್ ಸುನಿ ಮದುವೆ

ಫೆ.17ರಂದು ಚಿಕ್ಕಮಗಳೂರಿನಲ್ಲಿ ಸಿಂಪಲ್ ಸುನಿ ಮದುವೆ
Bangalore , ಸೋಮವಾರ, 6 ಫೆಬ್ರವರಿ 2017 (11:02 IST)
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಇದೇ ಫೆ.17ರಂದು ಅವರ ಮದುವೆ ಚಿಕ್ಕಮಗಳೂರಿನಲ್ಲಿ ಸಿಂಪಲ್ ಆಗಿ ನಡೆಯಲಿದೆ. ಇದೊಂದು ಸೆಲೆಬ್ರಿಟಿ ಮದುವೆಯಾದರೂ ಸುನಿ ಸಿಂಪಲ್ ಆಗಿಯೇ ಗೃಹಸ್ಥಾಶ್ರಮಕ್ಕೆ ಅಡಿಯಿಡುತ್ತಿದ್ದಾರೆ.
 
ಕೇವಲ ಬಂಧು ಮಿತ್ರರು ಮಾತ್ರ ಮದುವೆಗೆ ಹಾಜರಾಗುತ್ತಿದ್ದು ಫೆ.19ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಸೌಂದರ್ಯ ಮತ್ತು ಸುನಿ ಒಬ್ಬರನ್ನೊಬ್ಬರು ಪ್ರೇಮಿಸಿಕೊಳ್ಳುತ್ತಿದ್ದರು. 
 
ಇದು ಟ್ವಿಟ್ಟರ್ ಮೂಲಕ ಆರಂಭವಾದ ಪ್ರೇಮಕಥೆ. ಸುನಿಗೆ ಸಾಕಷ್ಟಿ ಮಂದಿ ಫಾಲೋಯರ್ಸ್ ಇದ್ದರೂ, ಈ ಹುಡುಗಿ ಮಾತ್ರ ಆಗಾಗ ಬರೆಯುತ್ತಿದ್ದ ಹನಿಗವನಗಳು ಸುನಿಯನ್ನು ಕಾಡುತ್ತಿದ್ದವು. ಎಲ್ಲದಕ್ಕೂ ಲೈಕ್ ಒತ್ತುತ್ತಿದ್ದರು. ಕಡೆಗೆ ಬಾಳಸಂಗಾತಿಯಾಗಿ ಸ್ವೀಕರಿಸಲು ಲೈಕ್ ಒತ್ತಿದ್ದಾರೆ. 
 
ಒಮ್ಮೆ ಇಬ್ಬರೂ ಭೇಟಿಯಾದೆವು. ಮನಸ್ಸಿನ ಒಳಗಿನ ಇಂಗಿತ ವ್ಯಕ್ತಪಡಿಸಿದೆ. ಕಡೆಗೆ ಪೋಷಕರನ್ನು ಒಪ್ಪಿಸುವುದು ದೊಡ್ಡ ಸವಾಲಾಗಿತ್ತು. ಈಗ ನಮ್ಮ ಮದುವೆಗೆ ಎಲ್ಲರೂ ಒಪ್ಪಿದ್ದಾರೆ ಎನ್ನುತ್ತಾರೆ ಸಿಂಪಲ್ ಸುನಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೂ.400 ಕೋಟಿ ಕ್ಲಬ್ ಸೇರಿದ ಮೋಹನ್ ಲಾಲ್