ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ವೈಯಕ್ತಿಕ ಜೀವನದಲ್ಲೂ ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ.
ಮೊದಲ ಪತ್ನಿ, ನಟಿ ಮಂಜು ವಾರಿಯರ್ ರಿಂದ ವಿಚ್ಛೇದನಗೊಂಡ ಬಳಿಕವೂ ಪುತ್ರಿ ದಿಲೀಪ್ ಬಳಿಯಲ್ಲೇ ಇದ್ದರು. ಆದರೆ ಇದೀಗ ಮಂಜು ವಾರಿಯರ್ ಮಗಳ ಭವಿಷ್ಯದ ದೃಷ್ಟಿಯಿಂದ ಆಕೆಯನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಮಲಯಾಳಂ ಮಾಧ್ಯಮ ವರದಿಗಳು ತಿಳಿಸಿವೆ.
ಇದೀಗ ಚಿತ್ರರಂಗದ ಪ್ರಮುಖ ನಾಯಕ ನಟರೂ ಅವರ ವಿರುದ್ಧ ಮಾತನಾಡಿದ್ದಾರೆ. ದಿಲೀಪ್ ಗೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದ ನಟ ಮುಖೇಶ್ ಕೂಡಾ ಇದೀಗ ದಿಲೀಪ್ ನನ್ನ ಸಹೋದರನಂತಿದ್ದರು. ಇಂತಹ ಕೆಲಸ ಮಾಡಬಹುದು ಎಂದುಕೊಂಡಿರಲಿಲ್ಲ ಎಂದಿದ್ದಾರೆ.
ಅಲ್ಲದೆ, ಇನ್ನೊಬ್ಬ ಸೂಪರ್ ಸ್ಟಾರ್, ದಿಲೀಪ್ ನಿಕಟವರ್ತಿಯಾಗಿದ್ದ ಜಯರಾಂ ಕೂಡಾ ದಿಲೀಪ್ ರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಮಲಯಾಳಂ ಸಿನಿಮಾ ಸಂಘಟನೆಗಳಿಂದಲೂ ವಜಾಗೊಂಡಿರುವ ದಿಲೀಪ್ ಏಕಾಂಗಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ