ಬೆಂಗಳೂರು: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ಹಿಂದೊಮ್ಮೆ ಕನ್ನಡ ಸಿನಿಮಾವೊಂದರಲ್ಲೂ ಕಾಣಿಸಿಕೊಂಡಿದ್ದರು.
ಬಹುಶಃ ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಸಿನಿಮಾವದು. ಅದರಲ್ಲಿ ಹಾಡೊಂದರಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಿದ್ದರು, ಡ್ಯಾನ್ಸ್ ಮಾಸ್ಟರ್ ಹರ್ಷ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು.
ಈ ಹಾಡಿನಲ್ಲಿ ಶಿವರಾಜ್ ಕುಮಾರ್ ಜತೆಗೆ ತೆಲುಗಿನ ರವಿ ತೇಜಾ, ಮಲಯಾಳಂ ಚಿತ್ರರಂಗದ ದಿಲೀಪ್ ಹೆಜ್ಜೆ ಹಾಕಿದ್ದರು. ಅದು ಒಂದೇ ಹಾಡಿನಲ್ಲಿ ದಿಲೀಪ್ ಕನ್ನಡ ಚಿತ್ರ ಪರದೆಯಲ್ಲಿ ಕಾಣಿಸಿಕೊಂಡಿದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ