Webdunia - Bharat's app for daily news and videos

Install App

ತಾತನ ಹುಟ್ಟುಹಬ್ಬಕ್ಕೆ ವಿಭಿನ್ನ ಟ್ರಿಬ್ಯೂಟ್ ಸಲ್ಲಿಸಿದ ಧನ್ಯಾ ರಾಮ್ ಕುಮಾರ್‌

Sampriya
ಬುಧವಾರ, 24 ಏಪ್ರಿಲ್ 2024 (15:49 IST)
Photo Courtesy X
ಬೆಂಗಳೂರು: ಇಂದು ವರನಟ ಡಾ ರಾಜಕುಮಾರ್‌ ಅವರ 96 ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

ಇನ್ನೂ ಕಂಠೀರವ ಸ್ಟೂಡಿಯೋದಲ್ಲಿರುವ ರಾಜಕುಮಾರ್ ಸಮಾಧಿಗೆ ಅವರ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು  ಪೋಸ್ಟ್‌ ಹಂಚಿ ಮುತ್ತುರಾಜನ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ಮೊಮ್ಮಗಳು ಧನ್ಯಾ ರಾಮ್‌ ಕುಮಾರ್‌ ಅವರು  ತಾತನ ಹುಟ್ಟು ಹಬ್ಬಕ್ಕೆ ಅವರ ಹಿಟ್ ಸಾಂಗ್‌ಗಳಿಗೆ ಬಿಗ್‌ಬಾಸ್ ಖ್ಯಾತಿಯ ಕಿಶನ್ ಜತೆ ಹೆಜ್ಜೆ ಹಾಕಿ  ವಿಭಿನ್ನವಾಗಿ ಟ್ರಿಬ್ಯೂಟ್ ಮಾಡಿದ್ದಾರೆ.  

ಇವರ ಈ ವಿಡಿಯೋ ಸದ್ಯ  ಸಖತ್ ವೈರಲ್ ಆಗುತ್ತಿದೆ. ಇತ್ತೀಚಿಗೆ ನಟಿಯರ ಜೊತೆ ಕಿಶನ್ ಬಿಳಗಲಿ ಡ್ಯಾನ್ಸ್ ವೀಡಿಯೋಗಳು ಬಹಳ ಸದ್ದು ಮಾಡುತ್ತಿವೆ. ಆ ಲಿಸ್ಟ್‌ಗೆ ಇದು ಸೇರಿಕೊಂಡಿದೆ.

ಇನ್ನೂ ಕಿಶನ್ ಅವರು ಬಿಗ್‌ಬಾಸ್ ಸೀಸನ್ 7ರ ಮೂಲಕ ತುಂಬಾನೇ ಖ್ಯಾತಿ ಗಳಿಸಿದರು.  ಮೂಲತಃ ಡ್ಯಾನ್ಸರ್ ಆಗಿರುವ ಕಿಶನ್ ಬಿಂದಾಸ್ ಡ್ಯಾನ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿಕ್ಕಮಗಳೂರಿನ ಕಿಶನ್ 'ಡ್ಯಾನ್ಸ್ ದಿವಾನೆ' ಹಿಂದಿ ರಿಯಾಲಿಟಿ ಶೋ ವಿನ್ನರ್ ಸಹ ಆಗಿದ್ದರು. ಇದೀಗ ನಟಿ ಧನ್ಯಾ ರಾಮ್‌ಕುಮಾರ್ ಜೊತೆ 'ರಾಜ ನನ್ನ ರಾಜ' ಚಿತ್ರದ ಸೂಪರ್ ಹಿಟ್ ಗೀತೆಗೆ ಹೆಜ್ಜೆ ಹಾಕಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments