Webdunia - Bharat's app for daily news and videos

Install App

ದರ್ಶನ್ ಭೇಟಿಗೆ ಇವರಿಗೆ ಮಾತ್ರ ಅವಕಾಶ: ಪತಿಯ ವಿಚಾರದಲ್ಲಿ ವಿಜಯಲಕ್ಷ್ಮಿ ಕಟ್ಟುನಿಟ್ಟು ಮಾಡಿದ್ದೇಕೆ

Krishnaveni K
ಶನಿವಾರ, 2 ನವೆಂಬರ್ 2024 (15:28 IST)
ಬೆಂಗಳೂರು: ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಯಾಗಿ ಈಗ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಭೇಟಿಗೆ ಕೇವಲ ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪತಿಯ ವಿಚಾರದಲ್ಲಿ ವಿಜಯಲಕ್ಷ್ಮಿ ಕಟ್ಟುನಿಟ್ಟಿನ ತೀರ್ಮಾನ ತೆಗೆದುಕೊಂಡಿದ್ದಾರೆ.

ದರ್ಶನ್ ಇದೀಗ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಅವರಿಗೆ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾ ಎಂಬ ಬಗ್ಗೆ ವೈದ್ಯರು ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು ಅವುಗಳ ವರದಿಗಾಗಿ ಕಾಯಲಾಗುತ್ತಿದೆ.

ಈ ನಡುವೆ ದರ್ಶನ್ ಆಸ್ಪತ್ರೆಯಲ್ಲಿದ್ದಾರೆಂದು ತಿಳಿದು ಸಾಕಷ್ಟು ಅಭಿಮಾನಿಗಳು ಪ್ರತಿನಿತ್ಯ ಬರುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ನೇಹಿತರೂ ದರ್ಶನ್ ಭೇಟಿಗೆ ಪ್ರಯತ್ನ ಪಡುತ್ತಿದ್ದಾರೆ. ಆದರೆ ಎಲ್ಲರಿಗೂ ದರ್ಶನ್ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಸದ್ಯಕ್ಕೆ ವಿಐಪಿ ವಾರ್ಡ್ ನಲ್ಲಿರುವ ದರ್ಶನ್ ಭೇಟಿಗೆ ಏಳು ಜನರಿಗೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಲಾಗಿದೆ.

ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರ ಸೂಚನೆ ಮೇರೆಗೇ ಆಸ್ಪತ್ರೆ ಈ ನಿರ್ಧಾರಕ್ಕೆ ಬಂದಿದೆ. ದರ್ಶನ್ ಭೇಟಿಗೆ ಪ್ರತಿನಿತ್ಯ ಸೆಲೆಬ್ರಿಟಿಗಳು ಬರುತ್ತಿದ್ದರೆ ಬೇರೆ ರೋಗಿಗಳಿಗೆ ತೊಂದರೆಯಾಗಬಹುದು ಮತ್ತು ದರ್ಶನ್ ಗೂ ವಿಶ್ರಾಂತಿ ಸಿಗಲ್ಲ ಎಂಬ ಕಾರಣಕ್ಕೆ ಕುಟುಂಬಸ್ಥರು ಈ ಕಟ್ಟುನಿಟ್ಟಿನ ತೀರ್ಮಾನಕ್ಕೆ ಬಂದಿದ್ದಾರಂತೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಕಣ್ಣ ರೆಪ್ಪೆಯಂತೆ ಕಾಪಾಡುತ್ತಿರುವುದು ಅವರ ಪತ್ನಿ ವಿಜಯಲಕ್ಷ್ಮಿ. ಇದೀಗ ಆಸ್ಪತ್ರೆಯಲ್ಲಿ ವಿಜಯಲಕ್ಷ್ಮಿ, ಪುತ್ರ ವಿನೇಶ್, ದರ್ಶನ್ ತಾಯಿ ಮೀನಾ, ಸಹೋದರ ದಿನಕರ್ ತೂಗುದೀಪ ಮತ್ತು ಆಪ್ತ, ನಟ ಧನ್ವೀರ್ ಗೌಡ ಹಾಗೂ ಲಾಯರ್ ಹೊರತುಪಡಿಸಿ ಯಾರನ್ನೂ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

ಸು ಫ್ರಮ್ ಸೋ ಮೂವಿ ಬಜೆಟ್ ಎಷ್ಟಿತ್ತು, ಗಳಿಸಿದ್ದೆಷ್ಟು ನೋಡಿದರೆ ಅಚ್ಚರಿಯಾಗ್ತೀರಿ

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ಮುಂದಿನ ಸುದ್ದಿ
Show comments