Select Your Language

Notifications

webdunia
webdunia
webdunia
webdunia

ಹಿಂಬಾಲಿಸಿದ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ದರ್ಶನ್

ಹಿಂಬಾಲಿಸಿದ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ದರ್ಶನ್
ಬೆಂಗಳೂರು , ಬುಧವಾರ, 23 ಫೆಬ್ರವರಿ 2022 (17:29 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಸ್ತೆಗಿಳಿದರೆ ಸಾಕು, ಅಭಿಮಾನಿಗಳು ಅವರ ವಾಹನವನ್ನು ಹಿಂಬಾಲಿಸುತ್ತಾರೆ. ಈ ಬಗ್ಗೆ ದರ್ಶನ್ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದರು.

ತಮ್ಮ ಕಾರನ್ನು ಹಿಂಬಾಲಿಸುವುದು, ಗಾಡಿ ಚಲಾಯಿಸುತ್ತಲೇ ಫೋಟೋ ತೆಗೆಯುವುದು ಇತ್ಯಾದಿ ಮಾಡಬೇಡಿ ಎಂದು ದರ್ಶನ್ ಹೇಳುತ್ತಲೇ ಇರುತ್ತಾರೆ. ಹಾಗಿದ್ದರೂ ಇದೀಗ ಕ್ರಾಂತಿ ಶೂಟಿಂಗ್ ಗೆ ತೆರಳುತ್ತಿದ್ದ ದರ್ಶನ್ ಕಾರು ಗಮನಿಸಿ ಕೆಲವು ಅಭಿಮಾನಿಗಳ ಗುಂಪು ಅವರನ್ನು ಹಿಂಬಾಲಿಸಿದ್ದಾರೆ. ಇದು ದರ್ಶನ್ ಕೆರಳುವಂತೆ ಮಾಡಿದೆ.

ರಸ್ತೆಯಲ್ಲೇ ಕಾರು ನಿಲ್ಲಿಸಿ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ‘ಸಾವಿರ ಸಲ ಹೇಳಿದ್ದೀನಿ. ಗಾಡಿಗಳಲ್ಲಿ ಬಂದು ಬೇರೆಯವರಿಗೆ ತೊಂದರೆ ಮಾಡೋದಲ್ಲ. ನಿಮಗೆ ಮಜಾ, ಆದ್ರೆ ಬೇರೆಯವರಿಗೆ ಇದರಿಂದ ತೊಂದರೆಯಾಗುತ್ತದೆ. ತಪ್ಪು ಚಿನ್ನ, ಹೀಗೆಲ್ಲಾ ಮಾಡಬಾರದು’ ಎಂದು ಅಭಿಮಾನಿಗಳ ಕೈ ಕುಲುಕುತ್ತಲೇ ಬುದ್ಧಿಮಾತು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಬಿಡುಗಡೆಗೆ 50 ದಿನಗಳು