Webdunia - Bharat's app for daily news and videos

Install App

ಎಷ್ಟು ಕೇಳಬೇಕೋ ಅಷ್ಟು ಮಾತ್ರ ಕೇಳಬೇಕು ಎಂದಿದ್ದ ದರ್ಶನ್: ಇಂದು ದುನಿಯಾ ವಿಜಯ್ ಹೇಳಿದ್ದರಲ್ಲಿ ತಪ್ಪೇನಿದೆ ಎಂದ ಫ್ಯಾನ್ಸ್

Krishnaveni K
ಶನಿವಾರ, 17 ಆಗಸ್ಟ್ 2024 (09:52 IST)
Photo Credit: Instagram
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಬಗ್ಗೆ ಕೇಳಿದಾಗ ದುನಿಯಾ ವಿಜಯ್ ನೀಡಿದ್ದ ಹೇಳಿಕೆ ನಿನ್ನೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ದುನಿಯಾ ವಿಜಯ್ ಬಗ್ಗೆ ಈ ಹಿಂದೆ ದರ್ಶನ್ ನೀಡಿದ್ದ ಹೇಳಿಕೆ ವೈರಲ್ ಆಗಿದೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದುನಿಯಾ ವಿಜಯ್ ಗೆ ದರ್ಶನ್ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದಾಗ ‘ಒಳ್ಳೆಯದಾಗಲಿ’ ಎಂದಷ್ಟೇ ಹೇಳಿ ಹೆಚ್ಚೇನು ಮಾತನಾಡಲ್ಲ ಎಂಬಂತೆ ಕೈ ಸನ್ನೆ ಮಾಡಿದರು. ದುನಿಯಾ ವಿಜಯ್ ನೀಡಿದ್ದ ಈ ಪ್ರತಿಕ್ರಿಯೆ ಭಾರೀ ವೈರಲ್ ಆಗಿತ್ತು.

ದರ್ಶನ್ ಬಗ್ಗೆ ಮಾತನಾಡಲು ಇಷ್ಟಪಡದ ದುನಿಯಾ ವಿಜಿ ಅವರಿಗೆ ಅವಮಾನ ಮಾಡಿದರು ಎಂದೆಲ್ಲಾ ದರ್ಶನ್ ಅಭಿಮಾನಿಗಳು ಟೀಕಿಸಿದ್ದರು. ಆದರೆ ಇದರ ಬೆನ್ನಲ್ಲೇ ಈಗ ದುನಿಯಾ ವಿಜಿ ಅಭಿಮಾನಿಗಳು ದರ್ಶನ್ ಅವರ ಹಳೆಯ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಈ ಹಿಂದೆ ದುನಿಯಾ ವಿಜಿ ಅರೆಸ್ಟ್ ಆಗಿದ್ದಾಗ ದರ್ಶನ್ ಗೆ ಮಾಧ್ಯಮಗಳು ಅವರ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದ್ದರು. ಆಗ ದರ್ಶನ್ ‘ಎಷ್ಟು ಕೇಳಬೇಕೋ ಅಷ್ಟು ಮಾತ್ರ ಕೇಳಬೇಕು’ ಎಂದು ಖಡಕ್ ಆಗಿ ಹೇಳಿದ್ದರು. ಆ ವಿಡಿಯೋ ವೈರಲ್ ಮಾಡಿರುವ ಅಭಿಮಾನಿಗಳು ಅಂದು ದರ್ಶನ್ ಮಾಡಿದ್ದನ್ನೇ ಇಂದು ದುನಿಯಾ ವಿಜಿ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಮುಂದಿನ ಸುದ್ದಿ
Show comments