ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್

ಗುರುವಾರ, 19 ಸೆಪ್ಟಂಬರ್ 2019 (09:24 IST)
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರು ಯುವ ನಟರ ಸಿನಿಮಾಗಳಿಗೆ ಬೆಂಬಲ ನೀಡುತ್ತಿರುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದೀಗ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಗೆ ಚಾಲೆಂಜಿಂಗ್  ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ.


ಪ್ರಜ್ವಲ್ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದ್ದು, ಇದನ್ನು ಡಿ ಬಾಸ್ ದರ್ಶನ್ ನೆರವೇರಿಸಿದ್ದಾರೆ. ‘ವೀರಂ’ ಎಂಬ ಹೊಸ ಸಿನಿಮಾದಲ್ಲಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಟೈಟಲ್ ಜತೆಗೆ ಫಸ್ಟ್ ಲುಕ್ ಕೂಡಾ ದರ್ಶನ್ ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಪ್ರಜ್ವಲ್ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ವಿಷ್ಣುವರ್ಧನ್ ಬರ್ತ್ ಡೇ ದಿನವೇ ಈ ಸಿನಿಮಾ ಲಾಂಚ್ ಆಗಿರುವುದು ವಿಶೇಷ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿನಿಮಾದಲ್ಲಿ ಸ್ಟಾರ್ ವಾರ್ ಇರಬೇಕು ಎಂದ ರಿಯಲ್ ಸ್ಟಾರ್ ಉಪೇಂದ್ರ