Webdunia - Bharat's app for daily news and videos

Install App

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

Sampriya
ಸೋಮವಾರ, 28 ಜುಲೈ 2025 (20:27 IST)
ಬೆಂಗಳೂರು:  ನಟ ದರ್ಶನ್ ಅವರು ಈ ಹಿಂದೆ ಒಂದು ಮಾತು ಹೇಳ್ತಿದ್ರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ವೇನು ಎಂದು ನಟಿ ರಮ್ಯಾ ಅವರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ್ದಾರೆ. 

ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಯಾರಿಗೂ ಕೆಟ್ಟ ಮೆಸೇಜ್ ಮಾಡದಂತೆ ಈ ಹಿಂದೆಯೇ ಹೇಳುತ್ತಿದ್ದರೆ ರೇಣುಕಾಸ್ವಾಮಿ ಪ್ರಕರಣ ನಡೆಯುತ್ತಿರಲಿಲ್ಲ ಅನ್ಸುತ್ತೆ. ರೇಣುಕಾಸ್ವಾಮಿ ದರ್ಶನ್ ಅವರ ಅಭಿಮಾನಿ ಆಗಿರುವುದರಿಂದ ಈ ಹಿಂದೆಯೇ ದರ್ಶನ್‌ ಅವರು ಕಿವಿಮಾತನ್ನು ಹೇಳುತ್ತಿದ್ದರೆ ಇಷ್ಟೆಲ್ಲಾ ನಡೆಯುತ್ತಿರಲಿಲ್ಲ ಎಂದರು. 

ಇನ್ನೂ ನಟಿ ರಕ್ಷಿತಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂ ಪೋಸ್ಟ್‌ ಸಂಬಂಧ ಪ್ರತಿಕ್ರಿಯಿಸಿದ ಅವರು, ಅವರಿಬ್ಬರು ನನ್ನ ವಿಚಾರವಾಗಿ ಪೋಸ್ಟ್ ಹಾಕಿಲ್ಲ ಅನ್ಸುತ್ತೆ. ವಿಜಿ ಅವರು ಅವರ ವಿಚಾರವಾಗಿ ಹೇಳಿರಬೇಕು, ಇನ್ನೂ ರಕ್ಷಿತಾ ಅವರ ಪೋಸ್ಟ್ ಇದಕ್ಕೂ ಸಂಬಂಧಿಸಿದ್ದಲ್ಲ ಅನ್ಸುತ್ತೆ ಎಂದರು. 

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಅವರು ಹಾಕಿದ ಪೋಸ್ಟ್ ಬಗ್ಗೆ ಮಾತನಾಡಿದ ರಮ್ಯಾ ಅವರು ನನ್ನ ಬಗ್ಗೆ ಹಾಕಿಲ್ಲ ಅನಿಸುತ್ತದೆ. ಆ ಬಗ್ಗೆ ಮಾತನಾಡುವುದು ಏನು ಇಲ್ಲ. ದರ್ಶನ್ ಅವರ ನಂಬರ್​ ಕೂಡ ನನ್ನ ಬಳಿ ಇಲ್ಲ. ರೇಣುಕಾಸ್ವಾಮಿ ಕೇಸ್​ಗೂ ಮೊದಲು ಅವರು ಒಮ್ಮೆ ಮದುವೆಯಲ್ಲಿ ಸಿಕ್ಕಿದ್ದರು ಅಷ್ಟೇ. ದರ್ಶನ್ ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್​​ಗೆ ಅವರು ಹೇಳಬೇಕು ಎಂದು ಹೇಳಿದ್ದಾರೆ.

ಇನ್ನೂ ದರ್ಶನ್ ಫ್ಯಾನ್ಸ್ ಅವರಿಂದ ಬರುತ್ತಿರುವ ಅಶ್ಲೀಲ ಮೆಸೇಜ್ ಸಂಬಂಧ ನಟಿ ರಮ್ಯಾ ಅವರು 43ಅಕೌಂಟ್ಸ್‌ಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೂಟಿಂಗ್ ಸ್ಥಳಕ್ಕೆ ಹೋಗುವಾಗ ದಾರಿ ತೋರಿಸಿದ ವ್ಯಕ್ತಿ, ಖ್ಯಾತ ನಟ ಮಮ್ಮೂಟ್ಟಿ ಆ ವ್ಯಕ್ತಿ ಜತೆ ನಡೆದುಕೊಂಡ ರೀತಿ ನೋಡಿದ್ರೆ ಶಾಕ್

ಅಂಗವೈಕಲ್ಯ ಬಗ್ಗೆ ತಮಾಷೆ: ಹಾಸ್ಯನಟ ಸಮಯ್‌ ರೈನಾ ಸೇರಿದಂತೆ ನಾಲ್ವರ ವಿರುದ್ಧ ದಾಖಲಾಗಿದ್ದ ಕೇಸ್ ಕೈಬಿಟ್ಟ ಸುಪ್ರೀಂ, ವಿವರಣೆ ಇಲ್ಲಿದೆ

ಟಾಕ್ಸಿಕ್‌ನಲ್ಲಿ ಹಸಿಬಿಸಿ ದೃಶ್ಯ: ಮಹಿಳೆಯರಿಗೆ ಗೌರವ ನೀಡದಿದ್ದರೆ ನಿಮ್ಮನ್ನು ರಾಜ್ಯದಿಂದ ಹೊರಹಾಕುತ್ತೇವೆ

ಹಾಸ್ಯ ನಟ ಚಿಕ್ಕಣ್ಣ ಮದುವೆಗೆ ದಿನಗಣನೆ: ಯಶ್‌-ರಾಧಿಕಾ ಪಂಡಿತ್‌ ದಂಪತಿಗೆ ಖುದ್ದು ಆಹ್ವಾನ

ಒಂದು ಹಿಟ್ ಆದ ಮೇಲೆ 50 ಕೋಟಿಗೆ ಡಿಮ್ಯಾಂಡ್ ಮಾಡಿದ್ರಂತೆ… ಇಲ್ಲಾ ಸಾರ್ ಇನ್ನೂ ಮೇಲೆ ಎಂದ ಯಶ್: ಇದು ಗತ್ತು..

ಮುಂದಿನ ಸುದ್ದಿ
Show comments