Publish Date: Mon, 27 Jun 2016 (09:37 IST)
Updated Date: Mon, 27 Jun 2016 (09:41 IST)
ನಟ ದರ್ಶನ್ ಅವರಿಗೆ ಪ್ರಾಣಿಗಳು ಅಂದ್ರೆ ಎಷ್ಟು ಪ್ರೀತಿ ಅವನ್ನೋದು ಎಲ್ಲರಿಗೂ ಗೊತ್ತೇ ಇದೆ. ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಇನ್ನು ಆಗಾಗ್ಗೆ ವಿದೇಶಿ ಪಕ್ಷಿಗಳನ್ನು ಇಲ್ಲಾ ಇನ್ನ್ಯಾವುದೋ ಪ್ರಾಣಿಯನ್ನು ತಂದು ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಸಲಹುತ್ತಾರೆ. ಅಲ್ಲದೇ ಮೈಸೂರು ಮೃಗಾಲಯದಲ್ಲೂ ಅವರು ಈ ಹಿಂದೆ ಆನೆಯೊಂದನ್ನು ದತ್ತು ಪಡೆದಿದ್ದರು.
ಇದೀಗ ದರ್ಶನ್ ಅವರು ಮತ್ತೊಂದು ಪ್ರಾಣಿಯನ್ನು ದತ್ತುಪಡೆದಿದ್ದಾರೆ. ಕಳೆದ ವರ್ಷ ಆನೆ ಮರಿಯೊಂದನ್ನು ದತ್ತು ಪಡೆದಿದ್ದ ದರ್ಶನ್ ಈ ಬಾರಿಯ ಮೃಗಾಲಯದ ಹುಲಿಯೊಂದನ್ನು ದತ್ತು ಪಡೆದಿದ್ದಾರೆ.ಅಲ್ಲದೇ ಆನೆ ಹಾಗೂ ಹುಲಿಯನ್ನು ದತ್ತು ಪಡೆದುಕೊಂಡಿರುವ ಬಗ್ಗೆ ಮೃಗಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿರುವ ದರ್ಶನ್ ಅವರು ಇನ್ಮೇಲೆ ಈ ಎರಡು ಪ್ರಾಣಿಗಳ ಸಂಪೂರ್ಣ ಜವಬ್ದಾರಿಯನ್ನು ತಾವೇ ವಹಿಸಿಕೊಳ್ಳಲಿದ್ದಾರೆ. ದರ್ಶನ್ ಅವರ ಪ್ರಾಣಿ ಪ್ರೇಮ ಎಷ್ಟಿದೆ ಅನ್ನೋದಕ್ಕೆ ಅವರೀಗ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿರೋದೇ ಸಾಕ್ಷಿ.
ಇನ್ನು ಮೊನ್ನೆ ಮೊನ್ನೆ ತಾನೇ ದರ್ಶನ್ ಅವರು ಫಾರ್ಮ್ ಹೌಸ್ ನಲ್ಲಿರುವ ತಮ್ಮ ಎರಡು ಎತ್ತುಗಳಿಗೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಅಂತಾ ನಾಮಕರಣ ಮಾಡಿದ್ದರು. ದರ್ಶನ್ ಅವರು ತಮ್ಮ ಶೂಟಿಂಗ್ ನಿಂದ ಫ್ರೀಯಾಗಿದ್ದಾಗ ಹೆಚ್ಚಾಗಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿ ಪಕ್ಷಿಗಳೊಂದಿಗೆ ಸಮಯ ಕಳೆಯುತ್ತಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.