ಬೆಂಗಳೂರು: ಥಿಯೇಟರ್ ನಲ್ಲಿ ಶೇ. 100 ಪ್ರೇಕ್ಷಕರಿಗೆ ಇನ್ನೂ ಅನುಮತಿ ನೀಡದೇ ಇರುವ ಸರ್ಕಾರದ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಸಮಾಧಾನ ತೋರಿದ್ದಾರೆ. ಇದಕ್ಕೆ ಉದ್ಯಮಿ ಅಂಬಾನಿ ಲಾಬಿ ಕಾರಣ ಎಂದು ನೇರವಾಗಿ ಆಪಾದಿಸಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ದರ್ಶನ್ ಥಿಯೇಟರ್ ಸಂಪೂರ್ಣ ತೆರೆಯದೇ ಇರುವುದರ ಹಿಂದೆ 5 ಜಿ ನೆಟ್ ವರ್ಕ್ ಕಾರಣ. ಉದ್ಯಮಿ ಅಂಬಾನಿ 5 ಜಿ ನೆಟ್ ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎನಿಸುತ್ತದೆ. 5 ಜಿ ನೆಟ್ ವರ್ಕ್ ಕ್ಲಿಕ್ ಆಗಬೇಕೆಂದರೆ ಒಟಿಟಿ ಸಿನಿಮಾಗಳು, ಆನ್ ಲೈನ್ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ದುಡ್ಡು ಬರೋದು. ಅದಕ್ಕೋಸ್ಕರ ಪಾಪ, ದೊಡ್ಡವರಿಗೆ ಹೇಳಿ ಹೀಗೆ ಮಾಡಿಸಿದ್ದಾರೆ. ಅಲ್ಲದೇ ಇದ್ದರೆ ದೇವಸ್ಥಾನ, ಮಾಲ್, ಸಮಾರಂಭಕ್ಕೆಲ್ಲಾ ಇರದ ರೆಸ್ಟ್ರಿಕ್ಷನ್ ಥಿಯೇಟರ್ ಗೆ ಮಾತ್ರವೇಕೆ? ನಾವು ಯಾವುದೇ ಕಾರಣಕ್ಕೂ ಒಟಿಟಿ ಫಾರ್ಮ್ಯಾಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲ್ಲ. ಅದು ಶೇ. 50 ಪ್ರೇಕ್ಷಕರಾದರೂ ಸರಿ, ಶೇ. 25 ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಟ್ಟರೂ ಸರಿ ಎಂದು ದರ್ಶನ್ ಲೈವ್ ನಲ್ಲಿ ಹೇಳಿದ್ದಾರೆ.