Webdunia - Bharat's app for daily news and videos

Install App

ಡಿ ಬಾಸ್ ಅಭಿಮಾನಿಗಳೆ ತಾಳ್ಮೆ ಕಳೆದುಕೊಳ್ಳಬೇಡಿ ಎಂದಾ ಸೋನು ಗೌಡ

Sampriya
ಶುಕ್ರವಾರ, 28 ಜೂನ್ 2024 (16:03 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಅವರ ಅಭಿಮಾನಿಗಳಲ್ಲಿ ಕೆಟ್ಟ ಮೆಸೇಜ್ ಕಳುಹಿಸಬೇಡಿ ಎಂದು  ಬಿಗ್‌ಬಾಸ್ ಸ್ಪರ್ದಿ ಸೋನು ಗೌಡ ಮನವಿ ಮಾಡಿದ್ದಾರೆ.

ದರ್ಶನ್ ಅಭಿಮಾನಿಗಳು ಕೆಲ ನಟ ನಟಿಯರಿಗೆ ಅವಾಚ್ಯವಾಗಿ ಮೆಸೇಜ್ ಕಳುಹಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸೋನು ಗೌಡ ಅವರು  ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ದರ್ಶನ್ ಅಭಿಮಾನಿಗಳು ಯೂಟ್ಯೂಬ್, ಇನ್​ಸ್ಟಾಂ, ಫೇಸ್​ಬುಕ್​ನಲ್ಲಿ ತುಂಬಾ ಕೆಟ್ಟದಾಗಿ ಕಮೆಂಟ್ಸ್ ಹಾಕುತ್ತಿದ್ದಾರೆ. ನಿಮ್ಮ ಡಿ ಬಾಸ್ ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಒತ್ತಾಯಿಸುತ್ತಲೇ ಇದ್ದಾರೆ. ನಾವಿನ್ನೂ ಚಿಕ್ಕೋರು, ಅವರ ಬಗ್ಗೆ ಮಾತನಾಡುವಷ್ಟು ನಾವಿನ್ನೂ ಬೆಳೆದಿಲ್ಲ. ನಾವು ಯಾರಿಗಾದರೂ ಒಮ್ಮೆ ಅಭಿಮಾನಿಯಾದರೆ ಸಾಯುವವರೆಗೆ ಅಭಿಮಾನಿಯಾಗಿಯೇ ಇರುತ್ತೇವೆ. ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆ ಆಗಿಯೇ ಆಗುತ್ತೆ.

ಒಳ್ಳೆಯವರಾಗಿದ್ದರು, ಕೆಟ್ಟವರಾಗಿದ್ದರು ಕಾನೂನಿನ ಪ್ರಕಾರ ತೀರ್ಪು ಬಂದೇ ಬರುತ್ತದೆ. ಅಲ್ಲಿಯವರೆಗೆ ತಾಳ್ಮೆ ಕಳೆದುಕೊಳ್ಳದೆ ಕಾಯೋಣ. ನಮಗೆ ಯಾವುದೇ ಥರ ಕೆಟ್ಟ ಸಂದೇಶಗಳನ್ನು, ಕಮೆಂಟ್ಸ್​ಗಳನ್ನು ಮಾಡಬೇಡಿ. ಅದೇ ರೀತಿ ಆ ಎರಡು ಕುಟುಂಬಗಳಿಗೂ ಸಹ ನ್ಯಾಯ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ.

ಇನ್ನೂ ದರ್ಶನ್ ಅವರು ನಿರಾಪರಾಧಿಯಾಗಿ ಜೈಲಿಂದ ಹೊರಬರಲಿ. ಕಷ್ಟ ಅಂತಾ ಬಂದವರಿಗೆ ಸಹಾಯ ಮಾಡುವ ಅವರು ಇಂತಹ ಕೃತ್ಯ ಮಾಡಲು ಸಾಧ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ನಂಬಿಕೆ. ನನ್ನ ನಂಬಿಕೆ ನಿಜವಾಗಲಿ ಎಂದು ಬಯಸುತ್ತೀನಿ. ಎಲ್ಲರಿಗೂ ಒಳ್ಳೆಯದಾಗಲಿ, ಮತ್ತೊಮ್ಮೆ ಹೇಳುತ್ತಿದ್ದೀನಿ, ಕೆಟ್ಟ ಕಮೆಂಟ್ಸ್​ಗಳು ಬೇಡ ಎಂದು ಸೋನು ಗೌಡ ಮನವಿ ಮಾಡಿಕೊಂಡರು.




ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ಮುಂದಿನ ಸುದ್ದಿ
Show comments