Select Your Language

Notifications

webdunia
webdunia
webdunia
webdunia

ಟೀಕೆಗಳು ನನ್ನ ಜೀವನದ ಭಾಗ ಎಂದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್

ಟೀಕೆಗಳು ನನ್ನ ಜೀವನದ ಭಾಗ ಎಂದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್
Mumbai , ಗುರುವಾರ, 24 ನವೆಂಬರ್ 2016 (14:39 IST)
ಮುಂಬೈ: ಯಶಸ್ಸಿನ ಉತ್ತುಂಗಕ್ಕೆ ಏರಿದ ಮೇಲೆ ಟೀಕೆಗಳೂ ಅವಿಭಾಜ್ಯ ಅಂಗವಾಗಿರುತ್ತದೆ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅಭಿಪ್ರಾಯಪಟ್ಟಿದ್ದಾರೆ.

“ಟೀಕೆಗಳು ನನ್ನ ಜೀವನದ ಭಾಗ. ಎಲ್ಲರಿಗೂ ನಾನು ಮಾಡುವ ಸಂಗೀತ ಇಷ್ಟವಾಗಬೇಕೆಂದಿಲ್ಲ. ಹಾಗಂತ ಎಲ್ಲರನ್ನೂ ತೃಪ್ತಿ ಪಡಿಸಲು ಹೊರಟರೆ ಯಾರನ್ನೂ ಮೆಚ್ಚಿಸಲು ಸಾಧ್ಯವಿಲ್ಲ” ಎಂದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಹೇಳಿದ್ದಾರೆ.

“ಕೆಲವೊಮ್ಮೆ ಟೀಕೆಗಳು ಅತೀ ಎನಿಸುತ್ತವೆ. ನಾನು ಧನಾತ್ಮಕ ಟೀಕೆಗಳನ್ನು ಮಾತ್ರ ಸ್ವೀಕರಿಸುತ್ತೇನೆ. ಯಾಕೆಂದರೆ ನಾವೂ ಮನುಷ್ಯರೇ. ಕೆಲವೊಂದು ವಿಷಯದ ಕಡೆಗೆ ಗಮನ ಕೊಡುವಾಗ ಇನ್ನು ಕೆಲವನ್ನು ನಿರ್ಲಕ್ಷಿಸುತ್ತೇವೆ” ಎಂದು ಅವರು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಎಂಥಿರಾನ್ 2 ಚಿತ್ರಕ್ಕೆ ಸಂಗೀತ ನೀಡಿರುವ ಎ.ಆರ್. ರೆಹಮಾನ್, ಜನರ ಪ್ರತಿಕ್ರಿಯೆ ಹೇಗಿರುತ್ತದೆಂದು ಕಾದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ನಲ್ಲಿ ಸುದೀಪ್ ಗೆ ಹೆಚ್ಚು ಫಾಲೋವರ್ಸ್ ವರದಿ ನವರಸನಾಯಕ ಜಗ್ಗೇಶ್ ಗೆ ಬೇಸರ ತಂದಿದೆಯಾ?