ನಾನ್ಯಾಕೆ ಹೋಟೆಲ್ ರೂಂಗೆ ಹೋಗ್ಲಿ? ಹೋಟೆಲ್ ರೂಂಗೆ ಬಿಲ್ ಕಟ್ಟದ ಆರೋಪಕ್ಕೆ ಪೂಜಾ ಗಾಂಧಿ ಪ್ರತಿಕ್ರಿಯೆ

Webdunia
ಮಂಗಳವಾರ, 19 ಮಾರ್ಚ್ 2019 (13:33 IST)
ಬೆಂಗಳೂರು: ಖಾಸಗಿ ಹೋಟೆಲ್ ನಿಂದ ಬಿಲ್ ಪಾವತಿ ಮಾಡದೇ ತೆರಳಿದ ಆರೋಪದ ಮೇಲೆ ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾಗಿದೆ.


2016 ಏಪ್ರಿಲ್ ನಿಂದ 2017 ರ ಮೇವರೆಗೆ ಪೂಜಾ ಗಾಂಧಿ ಅಶೋಕ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಅಶೋಕ ಹೋಟೆಲ್ ನಲ್ಲಿ ಪೂಜಾ ಗಾಂಧಿ ಮತ್ತು ಬಿಜೆಪಿ ನಾಯಕ ಅನಿಲ್ ಮೆಣಸಿನ ಕಾಯಿ ನಡುವೆ ಬಿಡಿಎ ಫೈಲ್ ಗೆ ಬಿಡಿಎ ಆಯುಕ್ತರಿಂದ ಸಹಿ ಹಾಕಿಸಿಕೊಳ್ಳಲು ಇಲ್ಲಿ ಡೀಲ್ ನಡೆದಿತ್ತು. ಆದರೆ ಇಬ್ಬರ ನಡುವೆ ವೈಮನಸ್ಯ ನಡೆದ ಕಾರಣ ಪೂಜಾ ಹಾಗೂ ಅನಿಲ್ ಮೆಣಸಿನಕಾಯಿ ಹೋಟೆಲ್ ಬಿಲ್‍ ಪಾವತಿಸದೇ ತೆರಳಿದ್ದರು ಎನ್ನಲಾಗಿದೆ.

ಆದರೆ ಈ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿರುವ ಪೂಜಾ ಗಾಂಧಿ, ನಾನು ಆವತ್ತು ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಕ್ಕೆ ಬಿಲ್ ಕ್ಲಿಯರ್ ಮಾಡಿದ್ದೇನೆ. ಆದರೆ ನನಗೆ ಅನಿಲ್ ಮೆಣಸಿನಕಾಯಿ ಸಹೋದರ ಸಮಾನ. ನಮ್ಮಿಬ್ಬರ ನಡುವೆ ಯಾವುದೇ ಡೀಲ್ ನಡೆದಿಲ್ಲ. ನಾನ್ಯಾಕೆ ಹೋಟೆಲ್ ನಲ್ಲಿ ಡೀಲ್ ಮಾಡಲಿ. ನನಗೆ ನನ್ನದೇ ಕುಟುಂಬವಿದೆ. ಈ ರೀತಿ ನನ್ನ ಮತ್ತು ಅವರ ಹೆಸರಿನ ನಡುವೆ ಕಳಂಕ ತರಬೇಡಿ ಎಂದಿದ್ದಾರೆ.

ಅತ್ತ ಅನಿಲ್ ಮೆಣಸಿನಕಾಯಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ನಾನು ಸಹಿ ಹಾಕಿಸಿಕೊಳ್ಳಬೇಕಿದ್ದರೆ ಪೂಜಾ ಗಾಂಧಿ ಬಳಿ ಯಾಕೆ ಹೋಗಲಿ? ಈ ಕೇಸ್ ಗೂ ನನಗೂ ಸಂಬಂಧವಿಲ್ಲ. ನಾನು ಎಲ್ಲೂ ಹೋಟೆಲ್ ರೂಂಗೆ ಹೋಗಿಲ್ಲ. ನನಗೆ ನನ್ನದೇ ಕುಟುಂಬ, ಪತ್ನಿ ಇದ್ದಾಳೆ. ನನ್ನ ಹೆಸರಿಗೆ ಇದುವರೆಗೆ ಯಾವುದೇ ಕಳಂಕ ಬಂದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಮುಂದಿನ ಸುದ್ದಿ
Show comments