Select Your Language

Notifications

webdunia
webdunia
webdunia
webdunia

ನುಗ್ಗೆಕಾಯಿ ಹಾಡಿಗೆ ಸ್ಟೆಪ್ ಹಾಕಿದ ಕ್ರಿಸ್ಟಿನಾ ಜಾಯ್

ನುಗ್ಗೆಕಾಯಿ ಹಾಡಿಗೆ ಸ್ಟೆಪ್ ಹಾಕಿದ ಕ್ರಿಸ್ಟಿನಾ ಜಾಯ್
Bangalore , ಸೋಮವಾರ, 9 ಜನವರಿ 2017 (12:03 IST)
ಸ್ಯಾಂಡಲ್‍ವುಡ್‌ನಲ್ಲಿ ಬಹಳ ಸೌಂಡ್ ಮಾಡುತ್ತಿರುವ ರಸವತ್ತಾದ ಸಿನಿಮಾ ನುಗ್ಗೆಕಾಯಿ. ಈ ಚಿತ್ರಕ್ಕೆ ಕಳೆದವಾರ ಮಂಗಳೂರಿನ ರಾಯಲ್ ಗಾರ್ಡನ್‍ನಲ್ಲಿ ನಾಯಕ ನಟ ಮಧುಸೂದನ್, ನಟಿ ಕ್ರಿಸ್ಟಿನಾಜಾಯ್ ಅಭಿನಯಿಸಿದ “ನುಗ್ಗೇಕಾಯಿ ತಿನ್ನು ಆಸೆಗೆ ಸ್ವರ್ಗ ಸುಖವು ನಿನ್ನ ಕೈಸೆರೆ, ಚಿಂತೆ ಯಾಕೋ ಒಂದು ಬಾರಿ ಸೊಂಟ ಬಳಸು” ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು.
 
ಈಗಾಗಲೇ ಮಾತಿನ ಭಾಗದ ಜೊತೆಗೆ ಐದು ಹಾಡುಗಳ ಚಿತ್ರೀಕರಣ ಕೂಡಾ ಮುಕ್ತಾಯವಾಗಿದೆ. ಇನ್ನು ಐದು ದಿನಗಳ ಚಿತ್ರೀಕರಣ ನಡೆದರ ಸಿನಿಮಾ ಪೂರ್ತಿಯಾದಂತೆ. ಚಿತ್ರಕ್ಕೆ ಎ.ವೇಣುಗೋಪಾಲ್ ಚಿತ್ರಕಥೆ, ನಿರ್ದೇಶನ, ಸುರೇಶ್ ಬಿ.ಎಸ್.ವಿ. ಸಾಹಿತ್ಯ ಮತ್ತು ಸಂಗೀತ, ಸೂರ್ಯಕಾಂತ್ ಹೊನ್ನಳ್ಳಿ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸಹ ನಿರ್ದೇಶನ, ಹೈಟ್‍ಮಂಜು, ಕಂಬಿರಾಜು ನೃತ್ಯ ನಿರ್ದೇಶನ, ಬಾಬುಖಾನ್ ಕಲಾನಿರ್ದೇಶನವಿದೆ. 
 
ಆ್ಯಡ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೀತಮ್ ಎಸ್ ಹೆಗ್ಡೆ (ಅನ್ನು) ಕಥೆ ಬರೆದು ನಿರ್ಮಿಸುತ್ತಿರುವ ನುಗ್ಗೇಕಾಯಿ ಚಿತ್ರದ ಪಾತ್ರವರ್ಗದಲ್ಲಿ ಮಧುಸೂದನ್, ಎಸ್ತಾರ್ ನರೋನ, ಸುಚೇಂದ್ರಪ್ರಸಾದ್, ಕ್ರಿಸ್ಟಿನಾಜಾಯ್, ದತ್ತಣ್ಣ, ಬ್ಯಾಂಕ್ ಜನಾರ್ಧನ್, ಬಿರಾದರ, ಪೂಜಾಶೆಟ್ಟಿ, ಜನಿಫರ್ ಆಂಟನಿ, ರಂಜಿತ್, ಉದಿತ್ ಪ್ರಸಾದ್, ಮುಂತಾದವರ ತಾರಾಬಳಗವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಅರವಿಂದ್ ಪುಷ್ಪಕ ವಿಮಾನದಲ್ಲಿ ಹಾರಾಡಿ ಬನ್ನಿ