Select Your Language

Notifications

webdunia
webdunia
webdunia
webdunia

ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಸೆಲೆಬ್ರಿಟಿಗಳು ಇವರೇ ನೋಡಿ

ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ  ಸೆಲೆಬ್ರಿಟಿಗಳು ಇವರೇ  ನೋಡಿ

Sampriya

ಮುಂಬೈ , ಮಂಗಳವಾರ, 17 ಸೆಪ್ಟಂಬರ್ 2024 (15:47 IST)
Photo Courtesy X
ಸೆಲೆಬ್ರಿಟಿಗಳ ಮದುವೆ ಎಂದರೆ ಅದೊಂದು ಅದ್ಧೂರಿತನ. ಆದರೆ ಕೆಲ ಸೆಲೆಬ್ರಿಟಿಗಳು ಮಾತ್ರ ತಮ್ಮ ಮದುವೆಯನ್ನು ತುಂಬಾನೇ ಸಿಂಪಲ್ ಆಗಿ ಮಾಡಿಕೊಂಡಿದ್ದಾರೆ.  ದೇವಾಲಯದ ತುಂಬಾನೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅದಿತಿ ರಾವ್ ಹೈದರಿ-ಸಿದ್ಧಾರ್ಥ್
ಈ ಜೋಡಿ ಈಚೆಗೆ ತುಂಬಾನೇ ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತೆಲಂಗಾಣದ 400ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವೊಂದರಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಅದಿತಿ ರಾವ್ ಹೈದರಿ ಅವರನ್ನು ನಟ ಸಿದ್ಧಾರ್ಥ್ ಕೈಹಿಡಿದರು.  ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಈ ಜೋಡಿ ರೋಮ್ಯಾಂಟಿಕ್ ಆಗಿ ಫೋಟೋಗೆ ಫೋಸ್ ನೀಡಿದರು.


ಐಶ್ವರ್ಯಾ ಅರ್ಜುನ್-ಉಮಾಪತಿ ರಾಮಯ್ಯ

ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ನಟಿ ಐಶ್ವರ್ಯಾ ಹಾಗೂ ನಟ ಉಮಾಪತಿ ರಾಮಯ್ಯ ಅವರು ಮದುವೆ ಜೂನ್‌ 10ರಂದು ಕುಟುಂಬದವರ ಸಮ್ಮುಖದಲ್ಲಿ ನಡೆಯಿತು.  ಇವರು ಕೂಡಾ ದೇವಸ್ಥಾನವೊಂದರಲ್ಲಿ  ಸಾಂಪ್ರದಾಯಿಕ ಶೈಲಿಯಲ್ಲಿ ಸರಳ ವಿವಾಹವನ್ನು ಆಯ್ಕೆ ಮಾಡಿದರು. ಚೆನ್ನೈನ ಗೇರುಗಂಬಾಕ್ಕಂನಲ್ಲಿರುವ ಶ್ರೀ ಯೋಗಾಂಜನೇಯರ್ ದೇವಸ್ಥಾನದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು.

ಇಶಿತಾ ದತ್ತಾ-ವತ್ಸಲ್ ಶೇಠ್

'ಟಾರ್ಜಾನ್: ದಿ ವಂಡರ್ ಕಾರ್' ಖ್ಯಾತಿಯ ವತ್ಸಲ್ ಶೇತ್ ಅವರು 'ದೃಶ್ಯಂ' ನಟಿ ಇಶಿತಾ ದತ್ತಾ ಅವರನ್ನು ನವೆಂಬರ್ 2017 ರಲ್ಲಿ ವಿವಾಹವಾದರು. ದಂಪತಿಗಳು ಮುಂಬೈನ ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕ ಮತ್ತು ಸರಳ ವಿವಾಹವನ್ನು ಆರಿಸಿಕೊಂಡರು. ಅವರು ಸಾಂಪ್ರದಾಯಿಕ ಬಂಗಾಳಿ ವಿವಾಹ ಸಮಾರಂಭವನ್ನು ಆರಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ನ್ಯಾಯಾಂಗ ಬಂಧನ ಮತ್ತೆ ಇಷ್ಟು ದಿನ ಮುಂದುವರಿಕೆ: ಇಂದು ಕೋರ್ಟ್ ನಲ್ಲಿ ದರ್ಶನ್ ಹೊಸ ಬೇಡಿ