Select Your Language

Notifications

webdunia
webdunia
webdunia
webdunia

ಚೆಕ್ ಬೌನ್ಸ್ ಕೇಸ್; ನಟ ಶರತ್ ಕುಮಾರ್ ಮತ್ತು ನಟಿ ರಾಧಿಕಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಚೆಕ್ ಬೌನ್ಸ್ ಕೇಸ್; ನಟ ಶರತ್ ಕುಮಾರ್ ಮತ್ತು ನಟಿ ರಾಧಿಕಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಚೆನ್ನೈ , ಗುರುವಾರ, 8 ಏಪ್ರಿಲ್ 2021 (10:19 IST)
ಚೆನ್ನೈ : ನಟ, ರಾಜಕಾರಣಿ ಶರತ್ ಕುಮಾರ್ ಮತ್ತು ಅವರ ಪತ್ನಿ ನಟಿ, ನಿರ್ಮಾಪಕಿ ರಾಧಿಕಾ ಶರತ್ ಕುಮಾರ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಕೋಟಿ ರೂ. ದಂಡ ವಿಧಿಸಿದೆ.

ಮ್ಯಾಜಿಕ್ ಫ್ರೇಮ್ ಸಂಸ್ಥೆಗಾಗಿ ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಅವರು 2014ರಲ್ಲಿ  ರೇಡಿಯನ್ಸ್ ಮೀಡಿಯಾದಿಂದ 1.5 ಕೋಟಿ ಸಾಲ ಪಡೆದಿದ್ದರು. ಆದರೆ ಶರತ್ ಕುಮಾರ್ ಅವರು ಈ ಸಾಲ ಮರುಪಾವತಿ ಮಾಡಲು ಮ್ಯಾಜಿಕ್ ಫ್ರೇಮ್ ಸಂಸ್ಥೆಯಿಂದ 50ಲಕ್ಷ ರೂ.ಗಳ  5 ಚೆಕ್ ನೀಡಿದ್ದರು.

ಆದರೆ ಈ ಚೆಕ್ ಗಳು ಬೌನ್ಸ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಕೋಟಿ ರೂ. ದಂಡ ವಿಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ ಚಲಾಯಿಸದ ಕಾಲಿವುಡ್ ಸೆಲೆಬ್ರಿಟಿಗಳು ಯಾರು ಗೊತ್ತಾ?