Select Your Language

Notifications

webdunia
webdunia
webdunia
Tuesday, 8 April 2025
webdunia

ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್ ಬೆನ್ನಲ್ಲೇ ಬೆಂಗಳೂರಿಗೆ ವಾಪಸಾದ ಚಾಲೆಂಜಿಂಗ್‌ ಸ್ಟಾರ್‌

Devil Cinema Shooting

Sampriya

ಬೆಂಗಳೂರು , ಶುಕ್ರವಾರ, 4 ಏಪ್ರಿಲ್ 2025 (15:00 IST)
Photo Courtesy X
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಎರಡು ವಾರದ ಹಿಂದೆ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್‌ ಮುಗಿಸಿರುವ ಚಾಲೆಂಜಿಂಗ್ ಸ್ಟಾರ್‌ ಅವರು ಕಳೆದ 10 ದಿನಗಳಿಂದ ರಾಜಸ್ಥಾನದಲ್ಲಿ ನಡೆಯುತ್ತಿದ್ದ ಡೆವಿಲ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಒಂದು ಹಂತದ ಶೂಟಿಂಗ್‌ ಮುಗಿಸಿರುವ ಅವರು ಇಂದು ಬೆಂಗಳೂರಿಗೆ  ವಾಪಸಾಗಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಡೆವಿಲ್ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರು ದರ್ಶನ್‌ಗೆ ಸಾಥ್ ನೀಡಿದ್ದರು. ಚಿತ್ರೀಕರಣ ಮುಗಿಸಿ ನಟ ದರ್ಶನ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಬೆಂಗಳೂರಿಗೆ ವಾಪಸ್ಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ಅವರು ರಾಜಸ್ಥಾನದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.
ಡೆವಿಲ್ ಚಿತ್ರಕ್ಕೆ ಮಿಲನಾ ಪ್ರಕಾಶ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಚಿತ್ರದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Manoj Kumar: ಬಾಲಿವುಡ್ ಹಿರಿಯ ನಟ ಮನೋಜ್ ಕುಮಾರ್ ಇನ್ನಿಲ್ಲ