Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರ ’ತಾರಕ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರ ’ತಾರಕ್’
Bangalore , ಮಂಗಳವಾರ, 14 ಫೆಬ್ರವರಿ 2017 (12:04 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ಅನೌನ್ಸ್ ಆಗಿದೆ. ಮಾರ್ಚ್ 1ರಂದು ಸೆಟ್ಟೇರಲಿರುವ ಈ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ತಾರಕ್ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಚಕ್ರವರ್ತಿ ಚಿತ್ರದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ.
 
ಚಕ್ರವರ್ತಿ ನಿರ್ಮಾಣ ನಂತರದ ಕೆಲಸಗಳಲ್ಲಿದ್ದು, ಅದು ಮುಗಿದ ಕೂಡಲೆ ತಾರಕ್ ಚಿತ್ರ ಸೆಟ್ಟೇರಲಿದೆ. ಮೊನಾಲಿಸಾ, ಶ್ರೀ, ಮಿಲನ ಚಿತ್ರಗಳನ್ನು ನಿರ್ಮಿಸಿದ್ದ ದುಷ್ಯಂತ್ ಈ ಚಿತ್ರದ ನಿರ್ಮಾಪಕರು. ದರ್ಶನ್ ಚಿತ್ರ ಎಂದರೆ ನಿರೀಕ್ಷೆಗಳು ಸಹಜ. 
 
ಮಿಲನ ಪ್ರಕಾಶ್ ಒಳ್ಳೆಯ ಕಥಾಹಂದರದ ಚಿತ್ರಗಳಿಗೆ ಹೆಸರಾದವರು.  ಇದೇ ಮೊದಲ ಬಾರಿಗೆ ದರ್ಶನ್ ಮತ್ತು ಪ್ರಕಾಶ್ ಕಾಂಬಿನೇಷನಲ್ಲಿ ಚಿತ್ರ ಮೂಡಿಬರುತ್ತಿರುವ ಕಾರಣ ಸ್ಯಾಂಡಲ್‌ವುಡ್‍ನಲ್ಲಿ ಡಬಲ್ ನಿರೀಕ್ಷೆಗಳಿವೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಶ್ರುತಿ ಹರಿಹರನ್ ಮತ್ತು ರಶ್ಮಿಕಾ ಮಂದಣ್ಣ. ಅರ್ಜುನ್ ಜನ್ಯ ಸಂಗೀತ, ಎವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ್ ’ಮುಗುಳುನಗೆ’ ಫಸ್ಟ್ ಲುಕ್ ಬಿಡುಗಡೆ