Daily Horoscope
✕

ಕಾಟೇರ ಸಕ್ಸಸ್ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದರ್ಶನ್

Krishnaveni K
ಶುಕ್ರವಾರ, 9 ಫೆಬ್ರವರಿ 2024 (14:30 IST)
Photo Courtesy: Twitter
ಬೆಂಗಳೂರು: ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾದ ಬೆನ್ನಲ್ಲೇ ನಟ ದರ್ಶನ್ ತಮ್ಮ ಸಂಗಡಿಗರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ದರ್ಶನ್ ಮತ್ತು ಸಂಗಡಿಗರು ತಿರುಪತಿಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಕಾಟೇರ ಸಿನಿಮಾ ಬಾಕ್ಸ್  ಆಫೀಸ್ ನಲ್ಲಿ 200 ಕೋಟಿ ಸನಿಹ ಗಳಿಕೆ ಮಾಡಿತ್ತು. ಈ ಭಾರೀ ಯಶಸ್ಸು ದರ್ಶನ್ ಉತ್ಸಾಹ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಚಿತ್ರಕ್ಕೆ ತಯಾರಿ ನಡೆದಿದೆ.

ಬರ್ತ್ ಡೇಗೆ ಎರಡು ಸಿಗಲಿದೆ ಎರಡು ಸಿನಿಮಾ ಅಪ್ ಡೇಟ್
ದರ್ಶನ್ ಇದೀಗ ಏಕಕಾಲಕ್ಕೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ. ಈ ಎರಡೂ ಸಿನಿಮಾಗಳ ಅಪ್ ಡೇಟ್ ಅವರ ಹುಟ್ಟುಹಬ್ಬದಂದು ಅಂದರೆ ಫೆಬ್ರವರಿ 16 ರಂದು ಸಿಗಲಿದೆ.

ಫೆಬ್ರವರಿ 16 ರಂದು ಡೆವಿಲ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಸಿನಿಮಾದ ಮುಹೂರ್ತ ಈಗಾಗಲೇ ನೆರವೇರಿದೆ. ಹೀಗಾಗಿ ದರ್ಶನ್ ಮುಂದೆ ಇದೇ ಸಿನಿಮಾವನ್ನು ಮೊದಲು ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆಗೇ ಪ್ರೇಮ್ ನಿರ್ದೇಶನದಲ್ಲಿ ಹೊಸ ಸಿನಿಮಾಗೂ ಅಂದೇ ಚಾಲನೆ ಸಿಗಲಿದೆ. ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಇದರ ಜೊತೆಗೆ ಕಾಟೇರ ಒಟಿಟಿ ಫ್ಲ್ಯಾಟ್ ಫಾರಂ ಜೀ5 ನಲ್ಲಿ ಬಿಡುಗಡೆಯಾಗುತ್ತಿದೆ.

ಈ ಕಾರಣಕ್ಕೆ ಅವರು ಇದೀಗ ಹೊಸ ಸಿನಿಮಾ ಕೆಲಸಕ್ಕೆ ಮುನ್ನ ತಿರುಪತಿ ದೇವಾಲಯಕ್ಕೆ ತಮ್ಮ ಸ್ನೇಹಿತರ ಜೊತೆ ಭೇಟಿ ನೀಡಿದ್ದಾರೆ.  ಸದ್ಯಕ್ಕೆ ಅವರ ಸಿನಿಮಾ ಜೀವನ ಉತ್ತುಂಗದಲ್ಲಿದ್ದು, ಅದೇ ಖುಷಿಯಲ್ಲಿ ಟೆಂಪಲ್ ರನ್ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸೂಪರ್ ಸ್ಟಾರ್ ಮೋಹನ್ ಲಾಲ್: ಕೇರಳದಲ್ಲಿ ಫುಲ್ ಹಲ್ ಚಲ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪುನೀತ್ ಬೆನ್ನಲ್ಲೇ ಮತ್ತೊಬ್ಬ ಪ್ರತ್ಯಕ್ಷ ಸಾಕ್ಷಿ ಕಿರಣ್ ಉಲ್ಟಾ; ದರ್ಶನ್ ಗೇನು ಲಾಭ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಮುಂದಿನ ಸುದ್ದಿ
Show comments