Select Your Language

Notifications

webdunia
webdunia
webdunia
webdunia

ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಲಿದ್ದಾನಾ ’ಚಕ್ರವರ್ತಿ’?

ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಲಿದ್ದಾನಾ ’ಚಕ್ರವರ್ತಿ’?
Bangalore , ಸೋಮವಾರ, 5 ಡಿಸೆಂಬರ್ 2016 (13:41 IST)
ಹತ್ತಾರು ನಿರೀಕ್ಷೆಗಳನ್ನು ಹೊತ್ತು ಬರುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಚಕ್ರವರ್ತಿ. ಈ ಚಿತ್ರದ ಕೆಲಹಂತದ ಶೂಟಿಂಗ್ ಪೂರ್ಣವಾಗಿದ್ದು ಹಾಡುಗಳ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ.  ಇದೇ ತಿಂಗಳ 10ರಂದು ಚಕ್ರವರ್ತಿ ಹಾಡುಗಳನ್ನು ಕೇಳುವ ಸಮಯ.  
 
ಈ ಚಿತ್ರದ ಸ್ಟಿಲ್ಸ್, ಮೇಕಿಂಗ್ ನೋಡ್ತಿದ್ರೆ ಲಾಂಗು ಮಚ್ಚುಗಳ ಆರ್ಭಟವಿಲ್ಲದಂತೆ ಬೇರೆ ರೀತಿಯಲ್ಲಿ ತೆರೆಗೆ ತರುತ್ತಿರುವುದು ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ದರ್ಶನ್‌ರ ರೆಬೆಲ್ ಅವತಾರ ಕಾಣಿಸಲ್ಲ. ಬದಲಾಗಿ ಶಾಂತಸ್ವಭಾವದ ಹೀರೋ ಆಗಿ ಅವರು ಮಿಂಚಲಿದ್ದಾರೆ ಎನ್ನುತ್ತವೆ ಮೂಲಗಳು. 
 
ದರ್ಶನ್‌ರ ಈ ಹಿಂದಿನ ಚಿತ್ರಗಳಾದ ಕರಿಯ, ದಾಸ ತರಹದ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಪ್ರಮುಖವಾಗಿ ಇರಲಿದೆಯಂತೆ. ಒಟ್ಟಾರೆ ದರ್ಶನ್ ಅವರು ಮತ್ತೆ ಈ ಚಿತ್ರದಿಂದ ಬಾಕ್ಸ್ ಆಫೀಸಲ್ಲಿ ಮಿಂಚಬೇಕಾಗಿದೆ. ಅಭಿಮಾನಿಗಳು ಅದನ್ನೇ ಬಯಸುತ್ತಿರುವುದು. 
 
ಇನ್ನೊಂದು ವಿಶೇಷ ಎಂದರೆ ದರ್ಶನ್ ಚಿತ್ರದ ಆಡಿಯೋ ಸಾಮಾನ್ಯವಾಗಿ ಅದ್ದೂರಿಯಾಗಿ ಬಿಡುಗಡೆಯಾಗುತ್ತದೆ. ಆದರೆ ಚಕ್ರವರ್ತಿ ಆಡಿಯೋ ಸರಳವಾಗಿ ರಿಲೀಸ್ ಮಡ್ತಿದ್ದಾರೆ. ಹೆಚ್ಚುಹೆಚ್ಚು ಜನಕ್ಕೆ ತಲುಪಲು ಮಾಧ್ಯಗಳನ್ನು ಬಳಸಿಕೊಳ್ಳಲು ಚಕ್ರವರ್ತಿಯ ಆಜ್ಞೆಯಾಗಿದೆಯಂತೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಬರ್ತಿದೆ ಮತ್ತೊಂದು ಹಾರರ್ ಸಿನಿಮಾ