Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಬರ್ತಿದೆ ಮತ್ತೊಂದು ಹಾರರ್ ಸಿನಿಮಾ

ಕನ್ನಡದಲ್ಲಿ ಬರ್ತಿದೆ ಮತ್ತೊಂದು ಹಾರರ್ ಸಿನಿಮಾ
Bangalore , ಸೋಮವಾರ, 5 ಡಿಸೆಂಬರ್ 2016 (13:21 IST)
ಈಗ ಏನಿದ್ದರೂ ಹಾರರ್ ಸಿನಿಮಾಗಳದ್ದೇ ಹವಾ. ಮೊನ್ನೆ ರಿಲೀಸ್ ಆದ ’ಮಮ್ಮಿ’ ಚಿತ್ರಕ್ಕೆ ಒಳ್ಳೇ ವಿಮರ್ಶೆ ವ್ಯಕ್ತವಾಗಿದೆ. ಹಾರರ್ ಸಿನಿಮಾಗಳು ಬಾಕ್ಸಾಫೀಸಲ್ಲಿ ಸೋತಿದ್ದು ಕಡಿಮೆ. ದೇವರ ಚಿತ್ರಗಳಿಗಿಂತ ದೆವ್ವದ ಚಿತ್ರಗಳೇ ನಿರ್ಮಾಪಕರನ್ನು ಕೈಹಿಡಿಯುತ್ತಿರುವುದು. ಈ ಮಾತು ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೂ ಸತ್ಯ. 
 
ಮಹಾ ಕಾಯ ಟೀಮ್ ವರ್ಕ್ಸ್ ಅವರ `ಡೈಯಾನ ಹೌಸ್'- ನಾಟ್ ಫಾರ್ ಸೇಲ್ ಹಾರರ್- ಕಾಮಿಡಿ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ. ಭರತ್ ನಂದನ್ ಅವರ ಕಥೆ, ಚಿತ್ರಕಥೆ, ನಿರ್ದೇಶನದ ಚಿತ್ರದ ನಿರ್ಮಾಪಕರು ಗಿರಿಧರ್ ಹಾಗೂ ರಾಜಶೇಖರ್. ಟಿ.ಎಂ. ಮೂರ್ತಿ ಅವರ ಸಂಭಾಷಣೆ ಹಾಗೂ ಗೀತ ಸಾಹಿತ್ಯ ಈ ಚಿತ್ರಕ್ಕಿದೆ. 
 
ರಾಘವ್ ನಾಗ್ ಹಾಗೂ ತೇಜಸ್ವಿನಿ ಮುಖ್ಯ ಪಾತ್ರಗಳಲ್ಲಿ, ಜೊತೆಗೆ ವರ್ಧನ್, ಸಿದ್ಲಿಂಗು ಶ್ರೀಧರ್, ಗುಂಡ್ರಗೋವಿ ಸತ್ಯ, ಮೈಕೊ ನಾಗರಾಜ್, ರಿತೇಷ್, ಶ್ರೀನಿವಾಸಪ್ರಭು ಪೋಷಕ ಕಲಾವಿದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಂದು ಹಾಡನ್ನು ಹಾಡಿರುವುದು ವಿಶೇಷ. ಮತ್ತೊಂದು ಪವನಸುತ ಹನುಮಾನ್ ಬಗ್ಗೆ ರಾಗ ಸಂಯೋಜನೆ ಮಾಡಿದ್ದಾರೆ. ನೋಬಿನ್ ಪಾಲ್, ಅರುಣ್ ಸುರೇಶ್ ಅವರ ಛಾಯಾಗ್ರಹಣ, ನಿರಂಜನ್ ಅವರ ಸಂಕಲನ, ಕುಂಗ್‍ಫೂ ಚಂದ್ರು ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

“ಭೂತಯ್ಯನ ಮೊಮ್ಮಗ ‘ಅಯ್ಯು’ ಕೈಹಿಡಿದ ಶ್ರುತಿ ಹರಿಹರನ್