Webdunia - Bharat's app for daily news and videos

Install App

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ರಜನಿಕಾಂತ್' ಹೀಗೆ ಹೇಳಿದ್ದು ಯಾರು?

Webdunia
ಮಂಗಳವಾರ, 20 ಮಾರ್ಚ್ 2018 (05:58 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟರೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮಿಳು ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನೀಕಾಂತ್ ಅವರಿಗೆ ಹೋಲಿಸಿದ್ದಾರೆ.


ಈ ರೀತಿ ಹೋಲಿಕೆ ಮಾಡಿದ್ದು ಬೇರೆ ಯಾರು ಅಲ್ಲ ಸ್ಯಾಂಡಲ್ ವುಡ್ ನ ನಟ ನವರಸನಾಯಕ ಜಗ್ಗೇಶ್ ಅವರು. ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ  ಕಲಾವಿದರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಿರುವ ಸಂದರ್ಭದಲ್ಲಿ ‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ರಜನಿಕಾಂತ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದರಿಂದ ನಟ ಜಗ್ಗೇಶ್ ಅವರು ರಜನೀಕಾಂತ್ ಅವರ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ ಎಂಬುದನ್ನು ನಾವು ಕಾಣಬಹುದು. ಹಾಗೇ ಈ ಬಗ್ಗೆ ಮಾತು ಮುಂದುವರಿಸಿದ ಜಗ್ಗೇಶ್ ಅವರು,’ ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್. ಕರೆಕ್ಟ್ ಆಗಿ ದರ್ಶನ್ ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ, ಕನ್ನಡದಲ್ಲಿ ಸಲ್ಮಾನ್ ಖಾನ್ ರೇಂಜ್ ಗೆ, 100 ಕೋಟಿ ಕ್ಲಬ್ ಗೆ ದರ್ಶನ್ ಹೋಗ್ತಾರೆ’ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments