Publish Date: Sat, 19 Sep 2020 (10:26 IST)
Updated Date: Sat, 19 Sep 2020 (10:28 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ನಲ್ಲಿ ವೀಕೆಂಡ್ ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ ಸಮಾರಾಧನೆಯಾಗುತ್ತಿತ್ತಾ? ಹೀಗೊಂದು ಅನುಮಾನದ ಮೇಲೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕುಲ್ ಒಡೆತನದ ರೆಸಾರ್ಟ್ ನಲ್ಲಿ ಆಗಾಗ ಪಾರ್ಟಿ ನಡೀತಾ ಇತ್ತು. ಅಲ್ಲಿಗೆ ಸ್ಟಾರ್ ನಟರು, ಅವರ ಪತ್ನಿಯರು ಬರುತ್ತಿದ್ದರು. ರಾಗಿಣಿ, ಸಂಜನಾ ಕೂಡಾ ಅಲ್ಲಿರುತ್ತಿದ್ದರು. ಈ ವೇಳೆ ಡ್ರಗ್ ಸರಬರಾಜಾಗುತ್ತಿತ್ತು ಎಂಬ ಅನುಮಾನ ಸಿಸಿಬಿ ಪೊಲೀಸರದ್ದು. ಇದೇ ನಿಟ್ಟಿನಲ್ಲಿ ಅವರೀಗ ಅಕುಲ್ ರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.