Select Your Language

Notifications

webdunia
webdunia
webdunia
webdunia

ನಟರಾಜ ಸರ್ವಿಸ್ ನಲ್ಲಿ ನೋಟು ಬದಲಾವಣೆ ಸಾಧ್ಯವಿಲ್ಲ!

ನಟರಾಜ ಸರ್ವಿಸ್ ನಲ್ಲಿ ನೋಟು ಬದಲಾವಣೆ ಸಾಧ್ಯವಿಲ್ಲ!
Bangalore , ಬುಧವಾರ, 16 ನವೆಂಬರ್ 2016 (09:22 IST)
ಬೆಂಗಳೂರು: ಶರಣ್ ಮತ್ತು ಮಯೂರಿ ಮುಖ್ಯ ಭೂಮಿಕೆಯಲ್ಲಿರುವ ನಟರಾಜ ಸರ್ವಿಸ್ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  ಆದರೆ ಚಿತ್ರತಂಡ ಈ ಹಿಂದೆ ಘೋಷಿಸಿದಂತೆ ಹಳೆ ನೋಟು ಕೊಟ್ಟು ಸಿನಿಮಾ ನೋಡಲು ಸಾಧ್ಯವಿಲ್ಲ.

500, 1000 ನೋಟು ನಿಷೇಧವಾಗಿರುವುದರಿಂದ ಚಿತ್ರ ನೋಡಲು ಬರುವವರ ಸಂಖ್ಯೆ ಕಡಿಮೆಯಾಗಬಹುದು ಎಂಬ ಹಿನ್ನಲೆಯಲ್ಲಿ ಚಿತ್ರ ತಂಡ ಹಳೇ ನೋಟು ಕೊಟ್ಟು ಸಿನಿಮಾ ನೋಡಬಹುದು ಎಂದಿತ್ತು. ಆದರೆ ಇದಕ್ಕೆ ಕಾನೂನು ತೊಡಕುಗಳಿದ್ದ ಕಾರಣ ಇದು ಸಾಧ್ಯವಾಗುತ್ತಿಲ್ಲ ಎಂದು ಚಿತ್ರ ತಂಡ ಪ್ರಕಟಿಸಿದೆ.

ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಮಾತ್ರ ನೋಟು ಬದಲಾವಣೆ ಸಾಧ್ಯ ಎಂದು ಕಟ್ಟು ನಿಟ್ಟಿನ ಕಾನೂನಿದೆ. ಇಲ್ಲವಾದರೆ ಹಣ ಬದಲಾವಣೆ ವಿಷಯದಲ್ಲಿ ದುರ್ಬಳಕೆಯಾಗುವ ಸಾಧ್ಯತೆ ಎನ್ನುವ ಕಾರಣಕ್ಕೆ ಸರ್ಕಾರ ಇಂತಹ ಕಟ್ಟು ನಿಟ್ಟು ಮಾಡಿದೆ. ಹಾಗಾಗಿ ಹಳೇ ನೋಟು ಕೊಟ್ಟು ಸಿನಿಮಾ ನೋಡಲು ಸಾಧ್ಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ತಿ ಗುಡಿ ದುರಂತದಲ್ಲಿ ತೀರಿಕೊಂಡ ಖಳ ನಟರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ